ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾ ದೇಶ ದಲ್ಲಿ ಅಲ್ಪಸಂಖ್ಯಾಕರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ವಿಶೇಷವಾಗಿ ಹಿಂದೂ ಸಮುದಾಯಕ್ಕೆ ಸೇರಿದ 49 ಶಿಕ್ಷಕರಿಂದ ಆಗ್ರಹಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಛಾತ್ರ ಐಕ್ಯ ಪರಿಷತ್‌ನ ಸಂಯೋಜಕ ಸಜೀಬ್ ಸರ್ಕಾರ್ ಆರೋಪಿಸಿದ್ದಾರೆ.
ವಿವಾದದ ಬಳಿಕ 19 ಶಿಕ್ಷಕರಿಗೆ ಹುದ್ದೆಗಳನ್ನು ಮರಳಿ ಕಲ್ಪಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಶಿಕ್ಷ ಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.ಆ. 18ರಂದು ಅಜೀಂಪುರದ ಸರಕಾರಿ ಮಹಿಳಾ ಕಾಲೇಜಿಗೆ ನುಗ್ಗಿದ್ದ 50 ವಿದ್ಯಾರ್ಥಿ ಗಳ ಗುಂಪು ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರ ರಾಜೀನಾಮೆಗೆ ಆಗ್ರಹಿಸಿತ್ತು. ಅಲ್ಲದೆ ಖಾಜಿ ನಸ್ರುಲ್ ವಿ.ವಿ.ಯ ಸಾರ್ವಜನಿಕ ಆಡಳಿತ ವಿಭಾಗ ಮುಖ್ಯಸ್ಥರಿಂದಲೂ ರಾಜೀನಾಮೆ ಪಡೆಯಲಾಗಿತ್ತು.

