ಅಸ್ಟ್ರೀಯಾ: ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಅಸ್ಟ್ರೀಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಅಸ್ಟ್ರೀಯಾದ ಗಣ್ಯರು ಅದ್ಧೂರಿಯಾಗಿ ವಿಶೇಷವಾಗಿ ಸ್ವಾಗತ ಕೋರಿದ್ದು ಅಸ್ಟ್ರೀಯಾದ ಖ್ಯಾತ ಸಂಗೀತಗಾರರು ಮೋದಿ ಎದುರು ವಿಶಿಷ್ಠವಾಗಿ ವಂದೇ ಮಾತರಂ ಸಮೂಹ ಗಾಯನ ನಡೆಸಿಕೊಟ್ಟಿದ್ದಾರೆ.
ಅಸ್ಟ್ರೀಯಾ ಪ್ರಜೆಗಳ ಕಂಠದಿಂದ ‘ವಂದೇ ಮಾತರಂ’ ಗಾಯನ ವಿಶೇಷವಾಗಿ ಮೂಡಿಬಂದಿದ್ದು ಮೋದಿ ಸೇರಿದಂತೆ ಅನೇಕ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊವನ್ನು ಎಕ್ಸ್ ತಾಣದಲ್ಲಿ ಮೋದಿ ಅವರು ಹಂಚಿಕೊಂಡಿದ್ದು ಸಾಕಷ್ಟು ಮೆಚ್ಚುಗೆ ಗಳಿಸಿದೆ. ಅಸ್ಟ್ರೀಯಾ ಸಾಕಷ್ಟು ವೈವಿಧ್ಯಮಯ ಸಂಗೀತಕ್ಕೆ ಹೆಸರುವಾಸಿಯಾಗಿದೆ. ನನ್ನೆದುರು ವಂದೇ ಮಾತರಂ ಗಾಯನ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿಕೊಂಡಿದ್ದಾರೆ.
Austria is known for its vibrant musical culture. I got a glimpse of it thanks to this amazing rendition of Vande Mataram! pic.twitter.com/XMjmQhA06R
— Narendra Modi (@narendramodi) July 10, 2024

