ವಾಷಿಂಗ್‌ಟನ್ : ಅಮೆರಿಗಾ ಮತ್ತು ಚೀನಾ ನಡುವೆ ಸುಂಕ ಸಮರ ಏರ್ಪಟ್ಟಿದೆ. ಇದೀಗ ಮತ್ತೆ ಅಮೆರಿಕಾ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 245% ನಷ್ಟು ಹೆಚ್ಚಿನ ಸುಂಕವನ್ನು ವಿಧಿಸಿದೆ. ಹೆಚ್ಚುವರಿ ಸುಂಕ ವಿಧಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕುವುದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಮತ್ತಷ್ಟು ಉಲ್ಬಣಗೊಂಡಿದೆ
ಈ ಎರಡು ದೇಶಳು ಪ್ರತೀಕಾರದ ಸುಂಕಗಳು ದಿನದಿಂದ ದಿನಕ್ಕೆ ಮತ್ತಷ್ಟು ಏರಿಸುತ್ತಿದ್ದು ಸುಂಕ ವಿಧಿಸಲು ಉಬಯ ದೇಶಗಳು ಪೈಪೋಟಿಗೆ ಬಿದ್ದಿವೆ. ಟ್ರಂಪ್ ಚೀನಾದ ಸರಕುಗಳ ಮೇಲೆ ಶೇ.145ರಷ್ಟು ಸುಂಕವನ್ನು ವಿಧಿಸಿದರೆ, ಡ್ರಾಗನ್ ದೇಶ ಸೂಪರ್ ಪವರ್ ಸರಕುಗಳ ಮೇಲೆ ಶೇ.125 ರಷ್ಟು ಸುಂಕ ವಿಧಿಸಿದೆ. ಇದರೊಂದಿಗೆ, ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧ ತೀವ್ರಗೊಂಡಿದೆ.
ಈ ಮಧ್ಯೆ ಚೀನಾ ತನ್ನ ದೇಶದ ಅಪರೂಪದ ಖನಿಜಗಳು, ಪ್ರಮುಖ ಲೋಹಗಳು ಮತ್ತು ಮ್ಯಾಗ್ನೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಮೆರಿಕಾಗೆ ರಫ್ತು ಮಾಡುವುದನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ನಿರ್ಧಾರದಿಂದ ಅಮೆರಿಕದ ರಕ್ಷಣಾ ಇಲಾಖೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದು ಯುಎಸ್‌ನ ಫೈಟರ್ ಜೆಟ್‌ಗಳ ತಯಾರಿಕೆ ಇತ್ಯಾದಿಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ವಿಶ್ವಾದ್ಯಂತ ಉತ್ಪಾದಿಸುವ ಒಟ್ಟು ಅಪರೂಪದ ಖನಿಜಗಳಲ್ಲಿ ಚೀನಾ ಶೇ.70ರಷ್ಟಿದೆ. ಅಮೆರಿಕದ ಪಾಲು ಕೇವಲ ಶೇ.11.4ರಷ್ಟಿದೆ. ಇದಲ್ಲದೆ, ಚೀನಾ ದೇಶೀಯ ವಿಮಾನಯಾನ ಸಂಸ್ಥೆಗಳು ಅಮೆರಿಕದ ಏರೋಸ್ಪೇಸ್ ದೈತ್ಯ ಬೋಯಿಂಗ್‌ನಿಂದ ಯಾವುದೇ ವಿತರಣೆಗಳನ್ನು ಸ್ವೀಕರಿಸದಂತೆ ಆದೇಶಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.

