ಸ್ಚಿಪೋಲ್: ವಿಮಾನದ ಸ್ಪಿನ್ನಿಂಗ್​​ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಆಂಸ್ಟರ್ಡ್ಯಾಮ್​ನ ಸ್ಚಿಪೋಲ್​ನಲ್ಲಿ ನಡೆದಿದೆ.

ಡಚ್​ ಏರ್​ಲೈನ್​ ಕೆಎಲ್​ಎಂ ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದೆ. ಆಂಸ್ಟರ್ಡ್ಯಾಮ್​​ನ ಶಿಪೋಲ್​ ವಿಮಾನ ನಿಲ್ದಾಣದಿಂದ ಡೆನ್ಮಾರ್ಕ್​ನ ಬಿಲ್ಲುಂಡೆಗೆ ಹೊರಟಿದ್ದ ವಿಮಾನದ ಟರ್ಬೈನ್​ ಬ್ಲೇಡ್​ಗೆ ವ್ಯಕ್ತಿ ಸಿಲುಕಿದ್ದಾನೆ. ಇನ್ನೇನು ಹಾರಾಡಲು ರೆಡಿಯಾಗಿದ್ದ ವಿಮಾನದ ಬ್ಲೇಡ್​​ಗೆ ಸಿಲುಕಿ ಬಲಿಯಾಗಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಬುಧವಾರದಂದು ನಡೆದ ಘಟನೆ ಇದಾಗಿದೆ. ಕೆಎಲ್​​1341 ವಿಮಾನ ಬಿಲ್ಲುಂಡ್​ಗೆ ಹಾರಲು ತಯಾರಿ ಸಡೆಸುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಡಚ್​ ಏರ್​ಲೈನ್​ ತಿಳಿಸಿದೆ. ಈ ದುರ್ಘಟನೆ ಸಂಭವಿಸಿದ ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.