ಜಪಾನ್ : ಒಂಟಿ ಕೋತಿ ಮರಿಗೆ ಒಂದು ಗೊಂಬೆಯೇ ತನ್ನ ಕುಟುಂಬ. ಆದರೆ ಅಲ್ಲಿರುವ ಬೇರೆ ಕೋತಿಗಳು ಆ ಕೋತಿಯನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದ ವಿಡಿಯೋ ಇದೀಗ ವೈರಲ್ ಆಗಿದೆ.
ಮರಿಗೆ ಹುಟ್ಟಿನಿಂದಲೇ ತಾಯಿ ಜತೆ ಸಂಪರ್ಕ ಇರಲಿಲ್ಲ, ಈ ಮರಿಯನ್ನು ಬೇರೆ ಮಂಗಗಳನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳಲು ಸಿದ್ಧವಿರಲಿಲ್ಲ. ಆ ಸಮಯದಲ್ಲಿ ಆ ಮಂಗಕ್ಕೆ ಗೊಂಬೆಯೊಂದು ಸಂಗಾತಿಯಾಗಿ ಸಿಕ್ಕಿತ್ತು, ಅದು ಆ ಗೊಂಬೆಯ ಜತೆಯೇ ಸಮಯ ಕಳೆಯಲು ಶುರು ಮಾಡಿತ್ತು. ಆದರೆ ಉಳಿದ ಮಂಗಗಳು ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಹೊರಬಿದ್ದಿವೆ.
ಕೋತಿ ಹೆಸರು ಪಂಚ್ ಅದು ಬೇರೆ ಕೋತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಕಷ್ಟಪಡುತ್ತಿದೆ ಯಾರೂ ಕೂಡ ಅದನ್ನು ತನ್ನ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ ಜನನದ ಸಮಯದಲ್ಲಿ ಕೇವಲ 500 ಗ್ರಾಂ ತೂಕವಿತ್ತು. ಮೊದಲ ಬಾರಿಗೆ ಪೋಷಕರಾಗಿದ್ದ ತಾಯಿ ಕೋತಿ, ಜನಿಸಿದ ನಂತರ ಅವನನ್ನು ನೋಡಿಕೊಳ್ಳಲು ವಿಫಲವಾಗಿತ್ತು. ಬೇರೆ ಕೋತಿಗಳು ಹೊಡೆದಾಗ ಆ ಮರಿ ತನ್ನ ಗೊಂಬೆ ಇದ್ದಲ್ಲಿಗೆ ಸಾಂತ್ವನಕ್ಕಾಗಿ ಓಡಿ ಹೋಗುವುದನ್ನು ಕಾಣಬಹುದು.

