ಲೆಬನಾನ್‌ : ಬೈರೂತ್‌ನ ದಕ್ಷಿಣ ಹೆದ್ದಾರಿಯಲ್ಲಿ ಕಾರುಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ಮೂರು ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೈದಾ ದಕ್ಷಿಣ ಭಾಗದ ಹೆದ್ದಾರಿಯ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ ಎಂದು ಸಚಿವಾಲಯವು ಹೇಳಿದೆ.