ವಿದೇಶ

6ತಿಂಗಳ ನಂತರ ನ್ಯೂಜಿಲೆಂಡ್ ನಲ್ಲಿ ಕಾಣಿಸಿದೆ ಕೊರೋನಾ : ಮೂರು ದಿನಗಳ ಕಾಲ ಸಂಪೂರ್ಣ ದೇಶ ಲಾಕ್ ಡೌನ್

ನ್ಯೂಜಿಲೆಂಡ್ : 6 ತಿಂಗಳ ನಂತರ ನ್ಯೂಜಿಲೆಂಡ್‌ ನಲ್ಲಿ ಮೊದಲ ಕೊರೋನ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾದ ಈ ಪ್ರಕರಣವು ಪತ್ತೆಯಾದ ನಂತರ ನ್ಯೂಜಿಲೆಂಡ್ ಪ್ರಧಾನಿ ಜೈಸಿಂಡಾ ಅರ್ಡೆನ್ ದೇಶಾದ್ಯಂತ ಮೂರು ದಿನಗಳ ಲಾಕ್‌ ಡೌನ್ ಘೋಷಿಸಿದ್ದಾರೆ.
ಕೊರೋನಾದ ಈ ಪ್ರಕರಣ ಮಂಗಳವಾರ ನ್ಯೂಜಿಲೆಂಡ್‌ ನ ಆಕ್ಲೆಂಡ್‌ ನಲ್ಲಿ ಬೆಳಕಿಗೆ ಬಂದಿದೆ. ಅದರ ನಂತರ ದೇಶಾದ್ಯಂತ ಮೂರು ದಿನಗಳ ಲಾಕ್‌ ಡೌನ್ ಘೋಷಿಸಲಾಗಿದೆ. ಆಕ್ಲೆಂಡ್‌ ನಲ್ಲಿ ಕಂಡುಬಂದಿರುವ ಈ ಪ್ರಕರಣವು ಕೊರೋನಾದ ಡೆಲ್ಟಾ ರೂಪಾಂತರದ್ದಾಗಿರಬಹುದು ಎಂದು ಅಲ್ಲಿನ ಜನತೆ ಗಾಬರಿಯಾಗಿದ್ದಾರೆ ಎನ್ನಲಾಗಿದೆ.
ನ್ಯೂಜಿಲ್ಯಾಂಡ್ ಪ್ರಧಾನಿ ಜೈಸಿಂಡಾ ಅರ್ಡೆನ್ ವೆಲ್ಲಿಂಗ್ಟನ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಲಾಕ್‌ ಡೌನ್ ಘೋಷಿಸಿದ್ದಾರೆ. ಅದೇ ಸಮಯದಲ್ಲಿ ಆಕ್ಲೆಂಡ್‌ ಮತ್ತು ಹತ್ತಿರದ ಕೋರಮಂಡಲ್‌ ನಲ್ಲಿ (ಸೋಂಕಿತ ವ್ಯಕ್ತಿ ಹೋದ ಸ್ಥಳಕ್ಕೆ) ಏಳು ದಿನಗಳ ಲಾಕ್‌ ಡೌನ್ ಘೋಷಿಸಲಾಗಿದೆ. ನ್ಯೂಜಿಲೆಂಡ್‌ ನಲ್ಲಿ ಈ ಲಾಕ್‌ ಡೌನ್ ಸಮಯದಲ್ಲಿ ಶಾಲೆಗಳು, ಸಾರ್ವಜನಿಕ ಸ್ಥಳಗಳು ಮುಚ್ಚಲ್ಪಡುತ್ತಿದ್ದು, ವ್ಯವಹಾರಗಳು ಸ್ಥಗಿತಗೊಳ್ಳಲಿದೆ. ಈ ಲಾಕ್‌ ಡೌನ್‌ ನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗಿದೆ. ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ ಹೊರಗೆ ಹೋಗಲು ಅಗತ್ಯವಿದ್ದಲ್ಲಿ ಮಾಸ್ಕ್ ಗಳನ್ನು ಬಳಸಲು ಮನವಿಯನ್ನು ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Indresh KC

Recent Posts

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

3 mins ago

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

11 mins ago

ಮಂತ್ರಿಮಾಲ್​ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್‌ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…

28 mins ago

ಭಾರತದಲ್ಲಿ ಮೊಟೊರೊಲ ಎಡ್ಜ್ 50 ಫ್ಯೂಷನ್ ಬಿಡುಗಡೆ

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಬಂದಿದೆ.

29 mins ago

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ ಯತ್ನ, ಪ್ರತಿಭಟನೆ

ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…

40 mins ago

ಅಕ್ರಮ ಅಡುಗೆ ಎಣ್ಣೆ ಮಾರಾಟ: ಚಾಲಕ ಪೊಲೀಸರ ವಶಕ್ಕೆ

ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ ಸಿಕ್ಕಿಬಿದ್ದಿರುವ…

41 mins ago