ಮಂಡ್ಯ

ಮಂಡ್ಯದ ಕಾವೇರಿ ಸಭಾಂಗಣದಲ್ಲಿಂದು ದಿಶಾ ಸಭೆ: ಗಣಿ ಕದನಕ್ಕೆ ಸುಮಲತಾ ಸಜ್ಜು

ಮಂಡ್ಯ: ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಸೇರಿದಂತೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಇದೀಗ ಮತ್ತೆ ಗಣಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಗರದ ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ (ಇಂದು) ದಿಶಾ ಸಭೆ ನಡೆಯಲಿದೆ. ಸಭೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಬೇಬಿ ಬೆಟ್ಟದಲ್ಲಿ ಬಾಂಬ್ ನಿಷ್ಕ್ರಿಯ ತಂಡದವರ ಕಣ್ಣಿಗೆ ಬೀಳದ ಸ್ಫೋಟಕಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
S ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆ ಅಪಾಯಕ್ಕೆ ಸಿಲುಕಿರುವುದು, ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳು, ಸಾರ್ವಜನಿಕ ಆತಂಕ, ಜೀವ ವೈವಿಧ್ಯದ ಮೇಲಾಗಿರುವ ಪರಿಣಾಮಗಳು, ವಾಯುಮಾಲಿನ್ಯ, ಜಲಮಾಲಿನ್ಯ, ಸಂಕುಲಗಳು ಅಪಾಯಕ್ಕೆ ಸಿಲುಕಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಖಾವತ್, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಗಣಿ ಖಾತೆ ರಾಜ್ಯ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರದ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಗಣಿ ಮಾಲೀಕರು ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿ ಕೊಡುವಂತೆ ಸಿಎಂ ಸೇರಿದಂತೆ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದೆ ಸುಮಲತಾ ಅವರಿಗೆ ಮೊರೆ ಇಟ್ಟಿದ್ದಾರೆ. ಆದರೆ ಈ ವಿಚಾರದಲ್ಲಿ ಗಣಿ ಮಾಲೀಕರ ಬೆಂಬಲಕ್ಕೆ ಯಾರೂ ನಿಲ್ಲುತ್ತಿಲ್ಲ.

Indresh KC

Recent Posts

ಸಾಕು ನಾಯಿ ವಿಚಾರಕ್ಕೆ ಮಾಲೀಕನಿಗೆ ಐವರಿಂದ ಹಲ್ಲೆ: ಆರೋಪಿಗಳು ಅರೆಸ್ಟ್‌

ಸಾಕು ನಾಯಿ ವಿಚಾರಕ್ಕೆ ಏಕಾಏಕಿ ಐವರು ನಾಯಿ ಮತ್ತು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ…

23 mins ago

ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು: ಫ್ಯಾನ್ಸ್​ ಶಾಕ್!

ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು.…

29 mins ago

ಬಾತ್​ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ !

ನಗರದಲ್ಲಿ​ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. 21 ವರ್ಷ ವಯಸ್ಸಿನ ಪ್ರಭುದ್ಧ ಎಂಬ ಯುವತಿ ಸಾವನ್ನಪ್ಪಿದ್ದಾಳೆ.

57 mins ago

ಅಂಜಲಿ‌ ಕೊಲೆ‌ ಕೇಸ್‌ ನಲ್ಲಿ ಕರ್ತವ್ಯ ಲೋಪ : ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಅಂಜಲಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ, ಬೆಂಡಿಗೇರಿ ಪೊಲೀಸ್‌ ಇನ್ಸ್‌ಪೆಕ್ಟರ್ ಸೇರಿ ಓರ್ವ ಸಿಬ್ಬಂದಿಯನ್ನು ಪೊಲೀಸ್ ಕಮೀಷನ‌ರ್ ಅಮಾನತು ಮಾಡಿ ಆದೇಶ…

1 hour ago

ಮಹತ್ವದ ತೀರ್ಪಿನಲ್ಲಿ ಇಡಿ ಕಾರ್ಯಗಳಿಗೆ ಕಡಿವಾಣ ಹೇರಿದ ಸುಪ್ರೀಂ ಕೋರ್ಟ್‌ !

ಅತ್ಯಂತ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯದ ಕಾರ್ಯಗಳಿಗೆ ಕಡಿವಾಣ ಹೇರಿದೆ. ಯಾವುದೇ ವ್ಯಕ್ತಿ ವಿರುದ್ಧ ದಾಖಲಾದ ಅಕ್ರಮ…

1 hour ago

ಅಪರೇಷನ್‌ ವೇಳೆ ವೈದ್ಯೆಯ ಎಡವಟ್ಟು : ಹೊಟ್ಟೆಯಲ್ಲಿತ್ತು 3 ಅಡಿ ಉದ್ದದ ಬಟ್ಟೆ

ಹೆರಿಗೆ ನಂತರ ಅಪರೇಷನ್‌ ವೇಳೆ ವೈದ್ಯರ ಎಡವಟ್ಟಿನಿಂದ 3 ಅಡಿ ಉದ್ದದ ಬಟ್ಟೆಯನ್ನು ಹೊಟ್ಟೆಯಲ್ಲೇ ಬಿಟ್ಟು ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ…

1 hour ago