ದಕ್ಷಿಣ ಕೊರಿಯಾ: ಭಾರತದಲ್ಲಿ ಮದುವೆ ಅಂದರೆ ಅದ್ಧೂರಿ ಮತ್ತು ದುಬಾರಿ. ಸಾಲ ಮಾಡಿ ಮದ್ವೆ ಆಗಬೇಕಾಗುತ್ತದೆ ಎಂಬ ಕಾರಣಕ್ಕೆ ಮದ್ವೆ ಅಂದ್ರೆ ಒಂದು ಹೆಜ್ಜೆ ಹಿಂದಕ್ಕೆ ಹಾಕುತ್ತಾರೆ. ಜನರು ಮದ್ವೆಯಾಗಲೂ ಆಸಕ್ತಿಯೇ ತೋರಿಸುತ್ತಿಲ್ಲವಂತೆ. ಅದಕ್ಕಾಗಿ ಸರ್ಕಾರವೇ ಮದುವೆ ಆಗಲು ಪ್ರಚೋದನೆ ನೀಡುತ್ತಿದೆ. ಮಾತ್ರವಲ್ಲದೆ 31 ಲಕ್ಷ ನೀಡುವುದಾಗಿ ಭರ್ಜರಿ ಆಫರ್ ರನ್ನು ದಕ್ಷಿಣ ಕೊರಿಯಾ ಘೋಷಿಸಿದೆ.
ಮದುವೆಯಾದರೆ 31 ಲಕ್ಷ ರೂಪಾಯಿ ನೀಡುವುದಾಗಿ ಸರ್ಕಾರವೇ ಘೋಷಿಸಿದೆ. ದಕ್ಷಿಣ ಕೊರಿಯಾದಲ್ಲಿ ಯುವ ಜನಾಂಗ ಮದುವೆ- ಮಕ್ಕಳ ಬಗ್ಗೆ ಸರಿಯಾಗಿ ಆಸಕ್ತಿ ತೋರಿಸುತ್ತಿಲ್ಲವಂತೆ. ಹೀಗಾಗಿ ಅಲ್ಲಿನ ಜನನ ಪ್ರಮಾಣ ಕುಸಿದಿದ್ದು, ಅದನ್ನು ಸಮ ಪ್ರಮಾಣಕ್ಕೆ ತರಲು ಸರ್ಕಾರ ಹೋರಾಡುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಬಹು ದೊಡ್ಡ ಅಪಾಯವನ್ನು ತಪ್ಪಿಸಲು ಸರ್ಕಾರ ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ 0.72ರಷ್ಟಿದೆ ಎನ್ನಲಾಗುತ್ತಿದ್ದು, 2023ರ ಜನಗಣತಿ ಪ್ರಕಾರ ಒಟ್ಟಾರೆ ಜನಸಂಖ್ಯೆಯ 49.84 ಮಿಲಿಯನ್ ಎಂದು ಬಹಿರಂಗಪಡಿಸಿದೆ. ಇದಲ್ಲದೆ ಜನನ ಪ್ರಮಾಣ ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ಯೋಜನೆ ಜಾರಿಗೊಳಿಸುತ್ತಿದೆ.

