ನವದೆಹಲಿ: ಕಳೆದ 24 ಗಂಟೆಯಲ್ಲಿ ದಾಖಲಾದ 41,810 ಕೊರೊನಾ ಸೋಂಕು ಪ್ರಕರಣಗಳೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 93 ಲಕ್ಷ ದಾಟಿದೆ.
496 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 1,36,696ಕ್ಕೆ ಏರಿದೆ.
ಪ್ರಸ್ತುತ ದೇಶದಲ್ಲಿ 4,53,956 ಮಂದಿ ಸೋಂಕಿತರಿದ್ದಾರೆ. ಇದುವರೆಗೆ 88,02,267 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 42,296 ಮಂದಿ ಗುಣಮುಖರಾಗಿದ್ದಾರೆ.