News Karnataka Kannada
Sunday, May 19 2024
ವಿದೇಶ

16 ತಿಂಗಳ ಮಗುವಿನ ಮೂಗಿನ ಮೂಲಕ ಮೆದುಳಿನ ಗಡ್ಡೆ ಹೊರತೆಗೆದ ವೈದ್ಯರ ತಂಡ

Photo Credit :

16 ತಿಂಗಳ ಮಗುವಿನ ಮೂಗಿನ ಮೂಲಕ ಮೆದುಳಿನ ಗಡ್ಡೆ ಹೊರತೆಗೆದ ವೈದ್ಯರ ತಂಡ

ಚಂಡೀಗಢ : 16 ತಿಂಗಳ ಮಗುವಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೂಗಿನ ಮೂಲಕ ಮೆದುಳಿನ ಗಡ್ಡೆಯನ್ನು ತೆಗೆದು ಮಗುವಿನ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾಘಟಕದಲ್ಲಿ ಈ ಘಟನೆ ನೆಡೆದದ್ದು, ಮೆದುಳಿನ ಗಡ್ಡೆಯ ( ಟ್ರೈನ್ ಟ್ಯೂಮರ್ ) ಸಮಸ್ಯೆಯಿಂದ ಬಳಲುತ್ತಿದ್ದ 16 ತಿಂಗಳ ಮಗುವಿನ ಮೂಗಿನಿಂದ ಆ ಗಡ್ಡೆಯನ್ನು ಹೊರತೆಗೆದು ಮಗುವಿನ ಪ್ರಾಣ ರಕ್ಷಿಸುವಲ್ಲಿ ಅಲ್ಲಿನ ವೈದ್ಯರು ಸಫಲರಾಗಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಇಂತಹ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ಪುಟ್ಟ ಕಂದಮ್ಮನ ಮೇಲೆ ಮಾಡಲಾಗಿದೆ ಎನ್ನುತ್ತಾರೆ ವೈದ್ಯರ ತಂಡ.

ದೃಷ್ಟಿ ದೋಷವಿದೆ ಎಂದು ದೂರಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಎಂ ಆರ್ ಐ ಸ್ಕ್ಯಾನಿಂಗ್ ನಡೆಸಿದ್ದಾರೆ . ಆ ಸಂದರ್ಭದಲ್ಲಿ ಮೆದುಳಿನಲ್ಲಿ ಸೆ.ಮೀ ಗಾತ್ರದ ಗಡ್ಡೆಯಿರುವುದು ಕಂಡುಬಂದಿತ್ತು. ನಂತರ ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಆ ಗೆಡ್ಡೆಯನ್ನು ಹೊರತೆಗೆಯಲಾಯಿತು ಎನ್ನಲಾಗಿದ್ದು, ಈ ಚಿಕಿತ್ಸೆಯನ್ನು ನರಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು – ಡಾ.ಧಂಡಪಾಣಿ ಎಸ್‌ಎಸ್ ಮತ್ತು ಡಾ.ಸುಶಾಂತ್ – ಮತ್ತು ಇಎನ್‌ಟಿ ವಿಭಾಗದ ಡಾ.ರಿಜುನೀತಾ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು