ಚೆನ್ನೈ: ಇಲ್ಲಿನ ಅಪರ್ಟ್ ಮೆಂಟ್ ವೊಂದರಲ್ಲಿ 11 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಕೂಡ ಒಬ್ಬನಾಗಿದ್ದಾನೆ.
ಬಾಲಕಿಗೆ ಪಾನೀಯದಲ್ಲಿ ಅಮಲಿನ ಮಾತ್ರೆ ನೀಡಿ ನಿರಂತರ ಅತ್ಯಾಚಾರ ಎಸಗಿದ್ದಾರೆ. ಆ ವೇಳೆ ಬಾಲಕಿಗೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆವೊಡ್ಡಿದ್ದಾರೆ. ಈ ವಿಚಾರವನ್ನು ಬಾಲಕಿ ಅಕ್ಕನ ಬಳಿ ಬಂದು ಹೇಳಿಕೊಂಡಿದ್ದಾಳೆ.
ನಂತರ ಪೋಷಕರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಪ್ರಕರಣವನ್ನು ಬೆನ್ನತ್ತಿದ್ದ ಪೊಲಿಸರು 17 ಮಂದಿಯನ್ನು ಬಂಧಿಸಿದ್ದು ಅದರಲ್ಲಿ ಲಿಫ್ಟ್ ಮ್ಯಾನ್ ಹಾಗೂ ನೀರು ಸರಬರಾಜು ಮಾಡುವ ವ್ಯಕ್ತಿಯೂ ಆಗಿದ್ದಾನೆ.