News Karnataka Kannada
Wednesday, May 08 2024
ವಿದೇಶ

ಹತ್ತು ವರ್ಷ ತಾಯಿಯ ದೇಹವನ್ನು ಫ್ರಿಡ್ಜ್ ನಲ್ಲಿ ಅಡಗಿಸಿಟ್ಟ ಮಹಿಳೆ

Photo Credit :

ಹತ್ತು ವರ್ಷ ತಾಯಿಯ ದೇಹವನ್ನು ಫ್ರಿಡ್ಜ್ ನಲ್ಲಿ ಅಡಗಿಸಿಟ್ಟ ಮಹಿಳೆ

ಜಪಾನ್: ಜಪಾನಿನ ಮಹಿಳೆ ತಾಯಿಯ ಹೆಪ್ಪುಗಟ್ಟಿದ ಶವವನ್ನು 10 ವರ್ಷಗಳ ಕಾಲ ಮರೆಮಾಚಿದ್ದು, ಹೊರಹಾಕಿದರೆ ಸಿಕ್ಕಿಬೀಳುವ ಭಯದಿಂದ ಈ ರೀತಿಯಾಗಿ ನಡೆದು ಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು ಸಾವಿನ ಹಿಂದಿನ ಕಾರಣ ನಿರ್ದಿಷ್ಟವಾಗಿ ಇನ್ನೂ ತಿಳಿದುಬಂದಿಲ್ಲ.

48 ವರ್ಷದ ಯುಮಿ ಯೋಶಿನೊ, 10 ವರ್ಷಗಳ ಹಿಂದೆಯೇ ತನ್ನ ತಾಯಿಯ ದೇಹ ಮರೆಮಾಚಿದ್ದು, ಈ ಎಲ್ಲ ಕೃತ್ಯಗಳ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಾಡಿಗೆ ಅಪಾರ್ಟ್ಮೆಂಟ್ ನ ಫ್ರೀಜರ್ ನಲ್ಲಿ ದೇಹವನ್ನು ಇರಿಸಲಾಗಿತ್ತು. ಬಾಡಿಗೆ ಪಾವತಿಸಲು ಸಾಧ್ಯವಾಗದೆ ಆಕೆಯನ್ನು ಮನೆಯಿಂದ ಹೊರ ಹೋಗುವಂತೆ ಮಾಡಿದ ಕಾರಣ ಈ ಕೃತ್ಯ ಬಯಲಿಗೆ ಬಂದಿದೆ. ಅಂತೆಯೇ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿಗಳು ತಿಳಿಸಿವೆ.

60 ವರ್ಷದ ಸಾವನಪ್ಪಿರುವ ಮಹಿಳೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಶವಪರೀಕ್ಷೆಯಲ್ಲಿ ಮಹಿಳೆಯ ಸಾವಿಗೆ ಸಮಯ ಮತ್ತು ಕಾರಣವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು