News Karnataka Kannada
Saturday, May 18 2024
ವಿದೇಶ

ಸುದ್ದಿ ಪತ್ರಿಕೆಗಳ ಆನ್ಲೈನ್ ಶೇರಿಂಗ್ ಕಾನೂನಿನ ಪ್ರಕಾರ ಅಪರಾಧ: ಸುಪ್ರೀಂಕೋರ್ಟ್ ವಕೀಲ

Photo Credit :

ಸುದ್ದಿ ಪತ್ರಿಕೆಗಳ ಆನ್ಲೈನ್ ಶೇರಿಂಗ್ ಕಾನೂನಿನ ಪ್ರಕಾರ ಅಪರಾಧ: ಸುಪ್ರೀಂಕೋರ್ಟ್ ವಕೀಲ

ನವದೆಹಲಿ: ಇಂದು ಪ್ರತಿಯೊಂದು ಸುದ್ದಿ ಪತ್ರಿಕೆಯು ತಮ್ಮದೇ ಆದ ವೆಬ್ಸೈಟ್ಗಳನ್ನು ಹಾಗೂ ಡಿಜಿಟಲ್ ಪತ್ರಿಕಾ ವ್ಯವಸ್ಥೆಯನ್ನು ಹೊಂದಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪತ್ರಿಕೆಗಳ ಪಿಡಿಎಫ್ ಅಥವಾ ಡಿಜಿಟಲ್ ಪತ್ರಿಕೆಗಳನ್ನು ಶೇರ್ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ವಕೀಲ ಪವನ್ ದುಗ್ಗಲ್ ಹೇಳಿದರು.

ಸುದ್ದಿಪತ್ರಿಕೆಗಳು ಮಾಲೀಕರ ಒಪ್ಪಿಗೆ ಇಲ್ಲದೆ ಪತ್ರಿಕೆಗಳನ್ನು ಆನ್ಲೈನ್ ಮೂಲಕ ಹಂಚಿಕೆ ಮಾಡುವುದು ಕೃತಿ ಸ್ವಾಮ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಮಾಡಿದಂತಾಗುತ್ತದೆ. ಇದರಿಂದ ಜನರಿಗೆ ತಪ್ಪು ಮಾಹಿತಿ ರವಾನೆಯಾಗುವ ಹಾಗೂ ಆ ಸುದ್ದಿಪತ್ರಿಕೆಗಳ ಹೆಸರಿನ ಮೇಲೆ ಕಪ್ಪು ಚುಕ್ಕೆ ಬೀಳುವ ಸಾಧ್ಯತೆಯಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿ ಪತ್ರಿಕೆಗಳನ್ನು ಆನ್ಲೈನ್ ಮೂಲಕ ಹಂಚುವುದರಿಂದ ಪತ್ರಿಕೋದ್ಯಮ ಪತ್ರಕರ್ತರು ಹಾಗೂ ಸಾಮಾನ್ಯ ಜನರ ಮೇಲು ಅದರದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂದು ಪವನ್ ದುಗ್ಗಲ್ ಹೇಳಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು