ಚೀನಾ : ಚೀನಾ ತನ್ನ ದೇಶದ ಲಸಿಕೆಗಳ ಪೈಕಿ 3 ಮಿಲಿಯನ್ ಲಸಿಕೆಯನ್ನು ವಿಯಟ್ನಾಂ ಗೆ ನೀಡಲು ತೀರ್ಮಾನಿಸಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಘೋಷಿಸಿದ್ದಾರೆ.
ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಯಟ್ನಾಂ ನಲ್ಲಿ ಈಗಾಗಲೇ ಲಾಕ್ ಡೌನ್ ವಿಧಿಸಲಾಗಿದೆ. 23 ಮಿಲಿಯನ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು,ಈಗಾಗಲೇ ಎಲ್ಲಾ ಮಕ್ಕಳು ಆನ್ ಲೈನ್ ನಲ್ಲಿ ತರಗತಿ ಕಲಿಯುತ್ತಿದ್ದಾರೆ.
ಹಾಗಾಗಿ ಕೊರೋನಾ ನಿಯಂತ್ರಣಕ್ಕೆ ತರುವಲ್ಲಿ ಸಹಾಯ ಮಾಡಲು ಚೀನಾ ತನ್ನ 3 ಮಿಲಿಯನ್ ಲಸಿಕೆಗಳನ್ನು ನೀಡುತ್ತಿದೆ.
ಈ ಹಿಂದೆ ವಿಯೆಟ್ನಂ ದಕ್ಷಿಣ ಸಮುದ್ರದಲ್ಲಿ ಚೀನಾ ತನ್ನ ಅನಿಲ ಪರಿಶೋಧನೆ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿತ್ತು.