ನವದೆಹಲಿ: ದೇಶದಲ್ಲಿ ಕಾರ್ಯನಿರ್ವಹಿಸುವಂತಹ ವಿದೇಶಿ ಕಂಪೆನಿಗಳು ಇಲ್ಲಿನ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ಸೂಚಿಸಿದರು.
ಚೀನಾದ 118 ಆಪ್ ಗಳನ್ನು ನಿಷೇಧಿಸಿರುವ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರೂಪಿಸಿರುವಂತಹ ದೇಶದ ನಿಯಮಗಳನ್ನು ಈ ಕಂಪೆನಿಗಳು ಪಾಲಿಸಬೇಕು. ಈ ಕಂಪೆನಿಗಳ ಕೆಲವೊಂದು ಚಟುವಟಿಕೆಗಳು ಇಲ್ಲಿನ ಕಾನೂನಿಗೆ ವಿರುದ್ಧವಾಗಿತ್ತು ಮತ್ತು ಕಾನೂನು ಪಾಲಿಸುವ ಕಂಪೆನಿಗಳಿಗೆ ದೇಶದಲ್ಲಿ ಯಾವಾಗಲೂ ಸ್ವಾಗತವಿದೆ ಎಂದರು.
ವಿಶ್ವದಲ್ಲಿ ಭಾರತವು ಅತೀ ಹೆಚ್ಚು ವಿದೇಶಿ ನೇರ ಹೂಡಿಕೆಗೆ ತೆರೆದುಕೊಂಡಿರುವ ದೇಶವಾಗಿದೆ. ಇದರಲ್ಲಿ ಇಂಟರ್ನೆಟ್ ಹಾಗೂ ಡಿಜಿಟಲ್ ಕಂಪೆನಿಗಳು ಕೂಡ ಸೇರಿವೆ ಎಂದು ತಿಳಿಸಿದರು.