ಕೋಲ್ಕತ್ತಾ: ಪ್ರಧಾನಿ ಮೋದಿಯಿಂದ ಪಡೆದ ಆಟೋಗ್ರಾಫ್ ನಿಂದ ಯುವತಿಯೊಬ್ಬಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸೆಲೆಬ್ರಿಟಿಯಾದ ಘಟನೆ ಈಚೆಗೆ ನಡೆದಿದೆ.
ಜುಲೈ 16ರಂದು ವಿದ್ಯಾರ್ಥಿನಿ ರೀಟಾ ತನ್ನ ತಾಯಿಯ ಜತೆಗೆ ಮಿಡ್ನಾಪುರದಲ್ಲಿ ಹಮ್ಮಿಕೊಂಡಿದ್ದ ಮೋದಿ ಸಮಾವೇಶದಲ್ಲಿ ಭಾಷಣ ಕೇಳಲು ತೆರಳಿದ್ದಾಳೆ. ಮೋದಿ ಭಾಷಣ ಮಾಡುತ್ತಿದ್ದಂತೆ ಚಪ್ಪರ ಕುಸಿದು ಬಿದ್ದ ಪರಿಣಾಮ ರೀಟಾ ಆಸ್ಪತ್ರೆಗೆ ದಾಖಲಾಗಿದ್ದಳು. ಆ ಬಳಿಕ ಪ್ರಧಾನಿ ಮೋದಿ ಆಸ್ಪತ್ರೆಗೆ ತೆರಳಿ ಗಾಯಗೊಂಡವರನ್ನು ವಿಚಾರಿಸಿದ್ದಾರೆ. ಈ ವೇಳೆ ರೀಟಾಳ ಆರೋಗ್ಯವನ್ನು ವಿಚಾರಿಸುತ್ತಿದ್ದಂತೆ ಮೋದಿ ಬಳಿ ಆಟೋಗ್ರಾಫ್ ನ್ನು ನೀಡುವಂತೆ ವಿನಂತಿಸಿಕೊಂಡಿದ್ದಾಳೆ.
ಆಟೋಗ್ರಾಫ್ ನೀಡಿದ ಮೋದಿ ಕಾಗದದಲ್ಲಿ ರೀಟಾ ಮುಡಿ ತುಮ್ ಸುಖಿ ರಹೋ(ರೀಟಾ ನೀನು ಸದಾ ಸುಖವಾಗಿರು) ಎಂದು ಬರೆದು ಸಹಿ ನೀಡಿದ್ದಾರೆ. ಇದೀಗ ಈ ಆಟೋಗ್ರಾಫ್ ರೀಟಾಳನ್ನು ಸೆಲೆಬ್ರೆಟಿಯಾನ್ನಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರು ರೀಟಾ ಗೆ ಆಟೋಗ್ರಾಫ್ ಬರೆದುಕೊಡುತ್ತಿರುವ ಚಿತ್ರ ವೈರಲ್ ಆಗಿದೆ. ಈಕೆಯ ಮನೆಗೆ ಬಂದು ಎಲ್ಲರು ಮಾತನಾಡಿಸಿಕೊಂಡು ಹೋಗುತ್ತಿರುವುದಲ್ಲದೆ ಆಕೆಗೆ ಮದುವೆ ಪ್ರಪೋಸಲ್ ಬರುತ್ತಿದೆ ಎಂದು ಸುದ್ದಿಯಾಗಿದೆ.