ನವದೆಹಲಿ: ಮುಂದಿನ ರಾಮ ನವಮಿಯಂದು ಅಂದರೆ 2020ರ ಏಪ್ರಿಲ್ 2ರಂದು ಅಯೋದ್ಯೆಯ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಂದಿರ ನಿರ್ಮಾಣಕ್ಕೆ1.75ಲಕ್ಷ ಘನ ಕಲ್ಲು ಬೇಕಾಗಿದ್ದು ಈಗಾಗಲೇ 1.25ಲಕ್ಷ ಘನ ಅಡಿ ಕಲ್ಲುಗಳ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ.
ವಾಸ್ತು ಶಿಲ್ಪಿ ಚಂದ್ರಕಾಂತ್ ಸೋಮಪುರ ವಿನ್ಯಾಸದಲ್ಲೇ ಮಂದಿರ ನಿರ್ಮಾಣ ಮಾಡಲು ವಿಎಚ್ ಪಿ ಬಯಸುತ್ತಿದೆ ಎನ್ನಲಾಗಿದೆ.