News Karnataka Kannada
Saturday, May 18 2024
ವಿದೇಶ

ಮೊಟ್ಟೆ ಕದ್ದ ಪಂಜಾಬ್ ಪೋಲೀಸ್‌ ಕಾನ್ಸ್‌ ಟೇಬಲ್‌ ಅಮಾನತ್ತು

Photo Credit :

ಮೊಟ್ಟೆ ಕದ್ದ  ಪಂಜಾಬ್  ಪೋಲೀಸ್‌  ಕಾನ್ಸ್‌ ಟೇಬಲ್‌ ಅಮಾನತ್ತು

ಚಂಡೀಗಡ : ಕಳ್ಳರನ್ನು ಹಿಡಿಯುವ ಪೊಲೀಸ್ ಕಳ್ಳತನ ಮಾಡಿ ಆರಕ್ಷಕರ ಕುರಿತು ಇರುವ ಈ ನಂಬಿಕೆಯನ್ನೇ ಸುಳ್ಳಾಗಿಸುವ ಪ್ರಸಂಗವೊಂದು ಪಂಜಾಬ್ ಪೊಲೀಸ್ ಕಾನ್ಸ್‌ಸ್ಟೇಬಲ್ ಮಾಡಿದ್ದಾರೆ.ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೇ ಕಳ್ಳತನ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೀಗೆ ಮೊಟ್ಟೆ ಕಳ್ಳತನ ಮಾಡಿರುವ ಪೊಲೀಸಪ್ಪನ ಹೆಸರು ಪ್ರೀತ್ಪಾಲ್ ಸಿಂಗ್. ಈತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸೈಕಲ್ ವೊಂದರಲ್ಲಿಡಲಾಗಿದ್ದ ಮೊಟ್ಟೆಗಳನ್ನು ಎಗರಿಸಿ, ತನ್ನ ಪ್ಯಾಂಟ್ ಜೇಬಿನಲ್ಲಿ ಇಳಿಸಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಮವಸ್ತ್ರದಲ್ಲಿದ್ದುಕೊಂಡೆ ಕಳ್ಳತನ ಮಾಡಿದ ಪೊಲೀಸನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರೀತ್ಪಾಲ್ ಸಿಂಗ್ ಮೊಟ್ಟೆ ಕಳ್ಳತನದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದು ಪಂಜಾಬ್ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿಸಿ ಪ್ರೀತ್ಪಾಲ್ ಸಿಂಗ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು