News Karnataka Kannada
Tuesday, April 30 2024
ವಿದೇಶ

ಮೂರನೇ ಬಾರಿ ಕೆನಡಾ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಜಸ್ಟಿನ್ ಟ್ರುಡೋ

Justin
Photo Credit :

ಕೆನಡಾದ ಲಿಬರಲ್ ಪಕ್ಷದ ಜಸ್ಟಿನ್ ಟ್ರುಡೋ ಮೂರನೇ ಬಾರಿ ಪ್ರಧಾನ ಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ. ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಜಸ್ಟಿನ್ ಟುಡ್ರೋ ಬರೋಬ್ಬರಿ 148 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಕನ್ಸರ್ವಟಿವ್ ಪಕ್ಷಕ್ಕೆ 108, ಕ್ವೆಬೆಕ್ ಆಧಾರಿತ ಬ್ಲಾಕ್ ಕ್ವೆಬೆಕಿಯನ್ನರು 28 ಹಾಗೂ ಎಡಪಕ್ಷಗಳು 22 ಸ್ಥಾನ ಪಡೆದುಕೊಂಡಿವೆ.
2009ರಲ್ಲಿ ಜಸ್ಟಿನ್ ಟ್ರುಡೋ ಲಿಬರಲ್ ಪಕ್ಷದ ವಕ್ತಾರರಾಗಿ ಆಯ್ಕೆಯಾಗಿದ್ದರು, ಇವರ ಕೆಲಸಗಳನ್ನು ಮೆಚ್ಚಿದ ಜನತೆ ಇವರನ್ನು ನಾಯಕನನ್ನಾಗಿ ಮಾಡಿದರು.

ಬಳಿಕ 2015ರ ಚುನಾವಣೆಯಲ್ಲಿ 184 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಪ್ರಧಾನಿಯಾದರು. ಇದೀಗ ಕೋವಿಡ್ ಸಮಯದ ಹೋರಾಟಕ್ಕೆ ಮೆಚ್ಚಿದ ಜನತೆ ಮತ್ತೆ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಜಸ್ಟಿನ್ ಟ್ರುಡೋ, ಲಿಬರಲ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಕ್ಕಾಗಿ ಕೆನಡಾ ಜನತೆಗೆ ಧನ್ಯವಾದಗಳು. ನಾವು ಕೋವಿಡ್ ವಿರುದ್ಧದ ಹೋರಾಟವನ್ನು ಮುಗಿಸಿ, ಕೆನಡಾವನ್ನು ಮುಂದೆ ನಡೆಸಲಿದ್ದೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು