News Karnataka Kannada
Tuesday, April 30 2024
ವಿದೇಶ

ನರೇಂದ್ರ ಮೋದಿ ಅಮೆರಿಕ ಭೇಟಿ, ‘ಅಮೆರಿಕದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು’ ನೀಡುವುದಾಗಿ ಬೆದರಿಕೆ : ಖಲಿಸ್ತಾನಿ

Primeminister Modi 29072021
Photo Credit :

ಖಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಪ್ರಧಾನಿ ಮೋದಿಗೆ ‘ಅಮೆರಿಕದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು’ ನೀಡುವುದಾಗಿ ಬೆದರಿಕೆಯೊಡ್ಡಿದೆ. ಅದೇ ವೇಳೆ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವಾಗ ಅಮೆರಿಕದ ಶ್ವೇತಭವನದ ಹೊರಗೆ ಪ್ರತಿಭಟನೆ ನಡೆಸಲು ಎಸ್‌ಎಫ್​​ಜೆ ಯೋಚಿಸಿದೆ.

ಪ್ರಧಾನಿ ಮೋದಿಗೆ ಅಮೆರಿಕಾದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವುದಾಗಿ ಎಸ್‌ಎಫ್ ಜೆ ಸಲಹೆಗಾರರಾದ ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾರೆ. ಸೆಕ್ಯುರಿಟಿ ಗ್ರಿಡ್‌ನ ಮೂಲಗಳ ಪ್ರಕಾರ ;ಎಸ್‌ಎಫ್‌ಜೆಗೆ ಹೆಚ್ಚಿನ ಬೆಂಬಲವೇನೂ ಇಲ್ಲ. ಅವರ ಹಲವಾರು ವಾಟ್ಸಾಪ್ ಗುಂಪುಗಳನ್ನು ಪ್ರಚಾರ ಉದ್ದೇಶಗಳಿಗಾಗಿ ರಚಿಸಿದ್ದಾರೆ. ಹಲವಾರು ಸಂಖ್ಯೆಯ ಪಾಕಿಸ್ತಾನಿಗಳು, ಹೆಚ್ಚಾಗಿ ಐಎಸ್‌ಐ ಏಜೆಂಟರು ಇದರಲ್ಲಿದ್ದಾರೆ. ಅಮೆರಿಕದಲ್ಲಿ ಕೂಡ ಅವರು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಾಗಿ ಹೆಚ್ಚಿನ ಜನರನ್ನು ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದೆ.

ಹಲವಾರು ವರ್ಷಗಳಿಂದ ಈ ಗುಂಪು ಆಕ್ಷೇಪಾರ್ಹ ವಿಷಯವನ್ನು ಅಪ್‌ಲೋಡ್ ಮಾಡಿದೆ ಮತ್ತು ಡಾರ್ಕ್ ವೆಬ್‌ನಲ್ಲಿ ವೆಬ್‌ಸೈಟ್‌ಗಳನ್ನು ತೆರೆದಿದೆ. ಅವುಗಳಲ್ಲಿ ಹಲವು ಕಾಣಿಸಿಕೊಂಡ ತಕ್ಷಣ ಅವುಗಳನ್ನು ತೆಗೆದುಹಾಕಲಾಗಿದೆ. ಅವರು ನಗದು ಬಹುಮಾನಗಳನ್ನು ಘೋಷಿಸುವ ಮೂಲಕ ರೈತರನ್ನು ಸೆಳೆಯಲು ಪ್ರಯತ್ನಿಸುತ್ತಾರೆ ಅಥವಾ ವಿದೇಶಗಳಲ್ಲಿ ಪೌರತ್ವದ ಭರವಸೆಯೊಂದಿಗೆ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡಲು ಯುವಕರನ್ನು ಪ್ರೋತ್ಸಾಹಿಸುತ್ತಾರೆ. ಇತರ ಪ್ರಮುಖ ತಂತ್ರವೆಂದರೆ ಗುಂಪಿಗೆ ಯಾವುದೇ ಪ್ರಾಮುಖ್ಯತೆ ನೀಡದೆ ಆದರೆ ಅದರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದಾಗಿದೆ.

ಸಿಖ್ಸ್ ಫಾರ್ ಜಸ್ಟೀಸ್ ಗುಂಪನ್ನು ಜುಲೈ 10, 2019 ರಂದು ಭಾರತ ಸರ್ಕಾರವು ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ನಿಷೇಧಿಸಿತು. ಸೆಪ್ಟೆಂಬರ್ 24 ರಂದು, ವಾಷಿಂಗ್ಟನ್‌ನಲ್ಲಿ ಕ್ವಾಡ್ರಿಲಾಟರಲ್ ಫ್ರೇಮ್ ವರ್ಕ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಇದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಯೋಜಿಸಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು