ಮುಂಬಯಿ: ಭಾರೀ ಮಳೆ ಬುಧವಾರವು ಮುಂದುವರಿದ ಪರಿಣಾಮ ರೈಲು ಸೇವೆಗೆ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಮುಂಬಯಿಯ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟಿರುವಂತಹ ಇಲ್ಲಿನ ರೈಲು ಸೇವೆಯು ಸ್ಥಗಿತವಾಗಿದೆ. ಇನ್ನು ಕೆಲವು ರೈಲುಗಳು ತುಂಬಾ ವಿಳಂಬವಾಗಿ ಸೇವೆ ನೀಡುತ್ತಿದೆ.
ರೈಲು ಹಳಿಗಳಲ್ಲಿ ನೀರು ತುಂಬಿರುವ ಪರಿಣಾಮವಾಗಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಮಹಾರಾಷ್ಟ್ರಕ್ಕೆ ಮಾನ್ಸೂನ್ ತುಂಬಾ ವಿಳಂಬವಾಗಿ ಆಗಮಿಸಿದರೂ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ರಸ್ತೆಗಳಲ್ಲಿ ಕೂಡ ನೀರು ತುಂಬಿರುವ ಪರಿಣಾಮವಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.