News Karnataka Kannada
Friday, May 03 2024
ವಿದೇಶ

ಮಾಧವಸಿನ್ಹ ಸೋಲಂಕಿ ನಿಧನ: ಪ್ರಧಾನಿ ಸಂತಾಪ

Photo Credit :

ಮಾಧವಸಿನ್ಹ ಸೋಲಂಕಿ ನಿಧನ: ಪ್ರಧಾನಿ ಸಂತಾಪ

ನವದೆಹಲಿ: ಗುಜರಾತ್ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ 93 ವರ್ಷದ ಮಾಧವಸಿನ್ಹ ಸೋಲಂಕಿಯವರು ಇಂದು ನಿಧನರಾದರು.

ಮಾಧವಸಿನ್ಹ ಸೋಲಂಕಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪವನ್ನು ಸೂಚಿಸಿದ್ದಾರೆ.

ಇವರು 1991-92ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿಯೂ ಮಾಧವಸಿನ್ಹ ಸೋಲಂಕಿ ಸೇವೆ ಸಲ್ಲಿಸಿದ್ದರು.

ಸೋಲಂಕಿ ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ರಾಜಕೀಯದಲ್ಲಿ ಸದ್ದು ಮಾಡಿದವರು. ಸಮಾಜಕ್ಕೆ ಅವರು ಉತ್ತಮವಾದ ಕೊಡುಗೆಯನ್ನು ನೀಡಿದ್ದು, ಅವರ ನಿಧನದಿಂದ ದು:ಖಿತನಾಗಿದ್ದೇನೆ. ಅವರ ಪುತ್ರ ಭಾರತ್ ಸೋಲಂಕಿ ಜೊತೆ ಮಾತನಾಡಿದ್ದು, ಸಂತಾಪವನ್ನು ಸೂಚಿಸಿದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ರಾಜಕೀಯದ ಹೊರತಾಗಿ ಮಾಧವಸಿನ್ಹ ಸೋಲಂಕಿ ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ನಾನು ಅವರನ್ನು ಭೇಟಿಯಾದಗೆಲ್ಲ ಅಥವಾ ಮಾತನಾಡುವಾಗಲೆಲ್ಲಾ ನಾವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರು ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ನನಗೆ ಮಾಹಿತಿ ನೀಡುತ್ತಿದ್ದರು. ನಾವು ಪರಸ್ಪರ ಹೊಂದಿದ್ದ ಸಂವಾದಗಳನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು