ನವದೆಹಲಿ: ಮಹಾರಾಷ್ಟ್ರ ರಾಜ್ಯದ ಮುಂಬೈ ಹಾಗೂ ಇತರ ಕೆಲವು ನಗರಗಳಲ್ಲಿ ಡ್ಯಾನ್ಸ್ ಬಾರ್ ತೆರೆಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಡ್ಯಾನ್ಸ್ ಬಾರ್ ಗಳಿಗೆ ಮಹಾರಾಷ್ಟ್ರ ಸರ್ಕಾರವು ವಿಧಿಸಿದ್ದ ಷರತ್ತುಗಳನ್ನು ಸರಳೀಕರಿಸಿರುವ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಹಾರಾಷ್ಟ್ರ ಸರ್ಕಾರದ ಕೆಲವೊಂದು ನಿಯಮಗಳು ಅವಿವೇಕದಿಂದ ಕೂಡಿದೆ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಡ್ಯಾನ್ಸ್ ಬಾರ್ ನೊಳಗೆ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಆದೇಶಿಸಿತ್ತು. ಆದರೆ ಇದು ಖಾಸಗಿತನದ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಉತ್ತಮ ನಡತೆ ಹೊಂದಿರುವ ವ್ಯಕ್ತಿಗೆ ಮಾತ್ರ ಡ್ಯಾನ್ಸ್ ಬಾರ್ ನ ಲೈಸನ್ಸ್ ನೀಡಬೇಕು ಎಂದು ರಾಜ್ಯ ಸರ್ಕಾರದ ನಿಯಮದ ಬಗ್ಗೆ ಹೇಳಿದ ಸುಪ್ರೀಂಕೋರ್ಟ್, ಉತ್ತಮ ನಡತೆ ವ್ಯಾಖ್ಯಾನಿಸುವುದು ತುಂಬಾ ಕಷ್ಟ ಎಂದು ತಿಳಿಸಿದೆ.
ಆದರೆ ಬಾರ್ ನೊಳಗೆ ಹಣ ಹಾಗೂ ನಾಣ್ಯಗಳನ್ನು ಚೆಲ್ಲುವಂತಿಲ್ಲ. ನೌಕರರಿಗೆ ಟಿಪ್ಸ್ ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.