News Karnataka Kannada
Monday, April 29 2024
ವಿದೇಶ

ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೆ ಐಆರ್‌ಸಿಟಿಸಿ ಹೊಸ ಪ್ಯಾಕೇಜ್

Indian Railway Irctc 26 6 21
Photo Credit :

ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೆ ಐಆರ್‌ಸಿಟಿಸಿ ಒಂದು ಹೊಸ ಪ್ಯಾಕೇಜ್ ನೀಡಿದೆ. ಇದೀಗ ನಿಮ್ಮ ಕಚೇರಿಯ ಕೆಲಸವನ್ನು ಕೇರಳದಲ್ಲಿಯೂ ಕುಳಿತು ಮಾಡಬಹುದು. ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಕೊಂಚ ಮಟ್ಟಿಗೆ ಉಲ್ಲಾಸ ಮತ್ತು ಹಿತವಾದ ಅನುಭವ ಒದಗಿಸಲಿದೆ. ಹೌದು ವರ್ಕ್ ಫ್ರಂ ಹೋಂ ಆಯ್ಕೆಯನ್ನು ವರ್ಕ್ ಫ್ರಂ ಹೋಟೆಲ್ ಎಂಬ ಪ್ಯಾಕೇಜ್ ಮೂಲಕ ಕೇರಳದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆ.
ಕೋವಿಡ್-19 ನಂತರ ಜಗತ್ತಿನಲ್ಲಿ ಆತಿಥ್ಯ ಸೇವೆಗಳನ್ನು ಪಡೆಯಲು ಅತಿಥಿಗಳ ನಡುವೆ ವಿಶ್ವಾಸವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಮತ್ತು ಪ್ರವಾಸೋದ್ಯಮದ ಒಂದು ಭಾಗವಾಗಿದೆ ಎಂದು ಐಆರ್‌ಸಿಟಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ಯಾಕೇಜ್‍ನಲ್ಲಿ ಒಬ್ಬರು ಐದು ರಾತ್ರಿಗಳು ತಂಗಬಹುದು. ಐದು ದಿನಕ್ಕೆ 10,126 ವೆಚ್ಚ ನಿಗದಿ ಮಾಡಲಾಗಿದೆ. ಇದು ರೂಂ, ಮೂರು ಹೊತ್ತು ಊಟ, ಎರಡು ಹೊತ್ತು ಟೀ ಮತ್ತು ಕಾಫಿ ನೀಡಲಿದ್ದಾರೆ. ಇದರ ಜೊತೆಗೆ ಕೆಲಸ ಮಾಡಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು. ವೈಫೈ ವ್ಯವಸ್ಥೆ ಇರಲಿದೆ. ಇನ್ನು ಕಾರು ಪಾರ್ಕಿಂಗ್ ಸೌಲಭ್ಯ ಕೂಡ ಇರಲಿದೆ ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.
ಲಾಕ್‍ಡೌನ್ ಅವಧಿಯಲ್ಲಿ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ ) ವೃತ್ತಿಪರರಿಗೆ ಹೋಟೆಲ್ ಕೋಣೆಗಳ ಸೌಕರ್ಯದಿಂದ ಹಿಡಿದು ವಿಭಿನ್ನ ಮತ್ತು ಉಲ್ಲಾಸಕರ, ಹಿತವಾದ ವಾತಾವರಣದೊಂದಿಗೆ ತಮ್ಮ ಕೆಲಸವನ್ನು ಮುಂದುವರಿಸಲು ವಿಶೇಷ ಪ್ಯಾಕೇಜ್‍ಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಅವರು ವಿಶ್ರಾಂತಿ ಮತ್ತು ಆನಂದಿಸಬಹುದು ಎಂದು ಹೇಳಿಕೆ ಮುಖೇನ ತಿಳಿಸಿದೆ. ಕಚೇರಿಯ ಸಾಂಪ್ರದಾಯಿಕ ವ್ಯವಸ್ಥೆಯಿಂದ ಕೊಂಚ ದೂರ ಇದ್ದು ವಿಭಿನ್ನ ಪರಿಸರದಲ್ಲಿ ವಿಭಿನ್ನ ಅನುಭವ ನೀಡಲಿದೆ. ವೃತ್ತಿಪರರು ಕೇರಳದಲ್ಲಿ ಯಾವ ಹೋಟೆಲ್‍ಗಳು ವರ್ಕ್ ಫ್ರಂ ಹೋಟೆಲ್ ಎಂಬ ಪ್ಯಾಕೇಜ್ ಅನ್ನು ಅಳವಡಿಸಿಕೊಂಡಿವೆಯೋ ಅಂತಹ ತಮಗೆ ಇಷ್ಟವಾದ ಹೋಟೆಲ್‍ಗಳನ್ನು ಬುಕ್ ಮಾಡಿಕೊಂಡು, ತಮ್ಮ ಅವಧಿಯನ್ನು ಆನಂದಿಸಬಹುದು. ಮುನ್ನಾರ್, ತೇಕಡಿ, ಕುಮಾರಕೋಮ್, ಮರಾರಿ (ಅಲೆಪ್ಪಿ), ಕೋವಲಮ್ ವಯನಾಡ್ ಮತ್ತು ಕೊಚ್ಚಿನ್ ವರ್ಕ್ ಫ್ರಂ ಹೋಟೆಲ್ ಪ್ಯಾಕೇಜ್‍ನ ಪಟ್ಟಿಯಲ್ಲಿ ಇರಲಿದೆ. ಇದರಲ್ಲಿ ಕನಿಷ್ಟ ಎಂದರೂ ಐದು ದಿನಗಳ ಕಾಲ ತಂಗಬೇಕಾಗುತ್ತದೆ. ತದನಂತರ ಇದನ್ನು ಮುಂದುವರೆಸಿಕೊಳ್ಳಬಹುದು. ಇತರ ಸ್ಥಳಗಳಿಗೂ ಇದೇ ರೀತಿಯ ಪ್ಯಾಕೇಜ್ ಅನ್ವಯವಾಗುವಂತೆ ನೋಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು