News Karnataka Kannada
Sunday, May 19 2024
ವಿದೇಶ

ಮದುವೆ ಬಳಿಕ ಮಹಿಳೆ ಧರ್ಮ ಪರಿವರ್ತಿಸಬೇಕಿಲ್ಲ: ಸುಪ್ರೀಂಕೋರ್ಟ್

Photo Credit :

ಮದುವೆ ಬಳಿಕ ಮಹಿಳೆ ಧರ್ಮ ಪರಿವರ್ತಿಸಬೇಕಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ಅಂತರ್ ಧರ್ಮೀಯ ವಿವಾಹವಾದರೆ ಹುಡುಗಿಯು ತನ್ನ ಧರ್ಮವನ್ನು ಬಿಟ್ಟು ಪತಿಯ ಧರ್ಮವನ್ನು ಸ್ವೀಕರಿಸಬೇಕೆಂದು ಯಾವುದೇ ಕಾನೂನು ಹೇಳಿಲ್ಲ ಎಂದು ಸುಪ್ರೀಂ ಕೋರ್ಟ್ ನ ಐದು ಮಂದಿ ನ್ಯಾಯಾಧೀಶರನ್ನು ಒಳಗೊಂಡಿರುವ ಸಂವಿಧಾನ ಪೀಠವು ಹೇಳಿದೆ.

ಯಾವುದೇ ಕಾನೂನಿನಲ್ಲಿ ಮಹಿಳೆಯು ಅಂತರ್ ಧರ್ಮೀಯ ವಿವಾಹವಾದ ಬಳಿಕ ತನ್ನ ಧರ್ಮ ತ್ಯಜಿಸಬೇಕು ಎಂದು ಹೇಳಿಲ್ಲ. ಅಂತರ್ ಧರ್ಮೀಯ ವಿಶೇಷ ವಿವಾಹ ಕಾಯ್ದೆಯಂತೆ ಅಂತರ್ ಧರ್ಮೀಯರು ಮದುವೆಯಾಬಹುದು ಮತ್ತು ಮೂಲ ಧರ್ಮವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ ಎಂದು ನ್ಯಾಯಪೀಠವು ತಿಳಿಸಿದೆ.

ಪಾರ್ಸಿ ಮಹಿಳೆಯಾಗಿದ್ದ ಗೂಲ್ರೊಕ್ ಎಂ. ಗುಪ್ತಾ ಎಂಬ ಮಹಿಳೆ ಹಿಂದೂವನ್ನು ಮದುವೆಯಾಗಿದ್ದಳು. ಅನ್ಯ ಧರ್ಮದವನನ್ನು ಮದುವೆಯಾದ ಕಾರಣ ಆಕೆಗೆ ತನ್ನ ಪೋಷಕರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಬಿಡಬಾರದು ಎಂದು ವಲ್ಸದ್ ಪಾರ್ಸಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯ ಪೀಠವು ಈ ತೀರ್ಪು ನೀಡಿದೆ.

ಹಿಂದೂ ಧರ್ಮದವನನ್ನು ಮದುವೆಯಾದ ಕಾರಣದಿಂದಾಗಿ ಮಹಿಳೆಯು ತನ್ನ ಧರ್ಮದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗುವಂತಿಲ್ಲ ಎಂದು 2010ರಲ್ಲಿ ಗುಜರಾತ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಗುಲ್ರೊಕ್ ಗುಪ್ತಾ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು