News Karnataka Kannada
Monday, April 29 2024
ವಿದೇಶ

ಭಾರತ ಮೂಲದ ಮಹಿಳೆ ವಂದಿತ ವರ್ಮ ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ

Vandi Varma 3 7 21
Photo Credit :

ಕ್ಯಾಲಿಫೋರ್ನಿಯ : ಮಂಗಳ ಗ್ರಹದ ಮೇಲೆ ಚಲಿಸುತ್ತಾ ಅಧ್ಯಯನ ನಡೆಸುತ್ತಿರುವ ‘ಪರ್ಸಿವರೆನ್ಸ್​’ ರೋವರ್​ಅನ್ನು ಚಾಲನೆ ಮಾಡುತ್ತಿರುವುದು ಭಾರತೀಯ ಮೂಲದ ಇಂಜಿನಿಯರ್ ವಂದಿ ವರ್ಮಾ. ಈಕೆ ಅಮೆರಿಕದ ನಾಸಾದ ಜೆಟ್​ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್​)ನಲ್ಲಿ ರೋಬೋಟಿಕ್ಸ್​ ಆಪರೇಷನ್ಸ್​ನ ಚೀಫ್ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹುಕಾಲದ ಹಿಂದೆ ನೀರಿನ ಕೊಳ ಹೊಂದಿತ್ತು ಎಂದು ಭಾವಿಸಲಾದ ‘ಜೆಜೆರೋ’ ಎಂಬ ಕ್ರೇಟರ್​ನ ಮೇಲೆ ಸದ್ಯಕ್ಕೆ ಪರ್ಸಿವರೆನ್ಸ್​ ಸಂಚಾರ ನಡೆಸುತ್ತಿದೆ. ಅಲ್ಲಿನ 15 ಕಿಲೋಮೀಟರ್​ನಷ್ಟು ನೆಲದ ಮೇಲೆ ಓಡಾಡಿ ಪ್ರಾಚೀನ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಹುಡುಕುವ ಕೆಲಸ ಮಾಡುತ್ತಿದೆ. “ಜೆಜೆರೋ ವಿಸ್ಮಯಕಾರಿಯಾಗಿದೆ” ಎಂದಿರುವ ವಂದಿ ವರ್ಮಾ, ತಮ್ಮ ಕೆಲಸದ ಬಗ್ಗೆ ಉತ್ಸಾಹ ಹೊಂದಿದ್ದಾರೆ. ಪಂಜಾಬಿನ ಹಲ್ವಾರದ ಮೂಲದವರಾದ ವರ್ಮಾರ ತಂದೆ, ಇಂಡಿಯನ್ ಏರ್​ ಫೋರ್ಸ್​ ಪೈಲೆಟ್​ ಆಗಿದ್ದರಂತೆ. ಕಾರ್ನೆಗಿ ಮೆಲ್ಲಾನ್ ಯೂನಿವರ್ಸಿಟಿಯಲ್ಲಿ ರೋಬೋಟಿಕ್ಸ್​ನಲ್ಲಿ ಪಿಎಚ್​.ಡಿ. ಮಾಡಿರುವ ವಂದಿ ವರ್ಮಾ, 2008 ರಿಂದ ಮಂಗಳ ಗ್ರಹದ ಮೇಲೆ ಅನ್ಯಾನ್ಯ ರೋವರ್​ಗಳ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪಿರಿಟ್​, ಆಪರ್ಚುನಿಟಿ ಮತ್ತು ಕ್ಯೂರಿಯಾಸಿಟಿ ರೋವರ್​ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸುಮಾರು 300 ಮಿಲಿಯನ್ ಕಿಲೋಮೀಟರ್​ಗಳ ದೂರದಲ್ಲಿ ಮಂಗಳದ ಮೇಲೆ, ಎಸ್‌ಯುವಿ ಗಾತ್ರದ ರೋವರ್​, ತನ್ನ ಪ್ರಯಾಣ ಆರಂಭಿಸಿದರೆ, ವರ್ಮ ಮತ್ತು ಇತರ ಇಂಜಿನಿಯರುಗಳ ತಂಡ ನಾಸಾದ ಲ್ಯಾಬಲ್ಲಿ ಬಹುಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ. ತನ್ನ ಚಕ್ರಗಳ ಮೇಲೆ ವಿಜ್ಞಾನ ಪ್ರಯೋಗಾಲಯವನ್ನು ಹೊತ್ತಿರುವ ರೋವರ್​, ಹಳ್ಳಕೊಳ್ಳಗಳ ಮೇಲೆ ಚಲಿಸಿ ಅಪಾಯಕ್ಕೀಡಾಗದಂತೆ ಇಲ್ಲಿನ ರೋವರ್​​ ಚಾಲಕರು ಮತ್ತು ಯೋಜಕರು ಅದರ ನ್ಯಾವಿಗೇಷನ್ನಿನ ಮಾರ್ಗವನ್ನು ನಿಖರವಾಗಿ ತಯಾರಿಸುತ್ತಾರೆ. ಸಾಟಲೈಟ್ ಇಮೇಜುಗಳನ್ನು ಬಳಸಿ 3ಡಿ ಗ್ಲಾಸಸ್​ ತೊಟ್ಟು ರೋವರ್​ನ ಸುತ್ತಣ ಜಾಗವನ್ನು ನೋಡಿ ಅದರ ಮಾರ್ಗವನ್ನು ತಯಾರಿಸಿ, ಸೂಚನೆಗಳನ್ನು ಮಂಗಳ ಗ್ರಹಕ್ಕೆ ಕಳುಹಿಸುತ್ತಾರೆ. ಮರುದಿನ ಆ ಸೂಚನೆಗಳಂತೆ ಮಾರ್ಗವನ್ನು ರೋವರ್ ಕ್ರಮಿಸುತ್ತದೆ. ಹೀಗೆ ಚಲಿಸುವಾಗ ಸಹಾಯ ಮಾಡಲು, ಪರ್ಸಿವರೆನ್ಸ್​ ರೋವರ್​ನಲ್ಲಿ ಕಂಪ್ಯೂಟರುಗಳು ಅಳವಡಿಸಲ್ಪಟ್ಟಿವೆ​ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು