ವಿದೇಶ

ಭಾರತ ದುಬೈನ ವ್ಯಾಪಾರ ಪಾಲುದಾರಿಕೆ ಹೊಂದುವ ಮೂಲಕ 2ನೇ ಸ್ಥಾನ ಪಡೆದಿದೆ

ಭಾರತ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದು, ಇದೀಗ ಭಾರತ ದುಬೈನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರಿಕೆ ಹೊಂದುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಹಿಂದಿಕ್ಕಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ ದುಬೈ ಸರ್ಕಾರ, 2021ರ ಮೊದಲಾರ್ಧದಲ್ಲಿ ಭಾರತ 67.1 ಬಿಲಿಯನ್ ದಿರ್ಹಾಮ್ (1 ದಿರ್ಹಾಮ್= 20.06 ರೂಪಾಯಿ) ಗಳನ್ನು ಗಳಿಸುವ ಮೂಲಕ 2ನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನದಲ್ಲಿರುವ ಚೀನಾ ಬರೋಬ್ಬರಿ 86.7 ಬಿಲಿಯನ್ ದಿರ್ಹಾಮ್ ಗಳನ್ನು ವ್ಯಾಪಾರ ಮಾಡಿದೆ.2020ರಲ್ಲಿ ಭಾರತ 38.5 ಬಿಲಿಯನ್ ದಿರ್ಹಾಮ್ ನಷ್ಟಿದ್ದ ವ್ಯಾಪಾರ, ಇದೀಗ ಶೇ.74.5 ಪ್ರತಿಷತ ಹೆಚ್ಚಿಸಿದೆ. ಚೀನಾ ಕೂಡ 2020ರ ತನ್ನ 66.3 ಬಿಲಿಯನ್ ವಾರ್ಷಿಕ ವ್ಯವಹಾರದ ಪಾಲನ್ನು ಶೇ.30.7ರಷ್ಟು ಹೆಚ್ಚಿಸಿದೆ.

ಚೀನಾ, ಭಾರತದ ನಂತರ ಮೂರನೇ ಸ್ಥಾನದಲ್ಲಿರುವ ಅಮೆರಿಕ ಈ ವರ್ಷ 32 ಬಿಲಿಯನ್ ದಿರ್ಹಾಮ್ ನಷ್ಟು ವ್ಯಾಪಾರವನ್ನು ದುಬೈನೊಂದಿಗೆ ಮಾಡಿದೆ. ದುಬೈನ ಅತ್ಯಮೂಲ್ಯ ವಸ್ತುಗಳಲ್ಲಿ ಚಿನ್ನ, ವಜ್ರ, ಟೆಲಿಕಾಂ ವ್ಯಾಪಾರಗಳು ದುಬೈ ಟ್ರೇಡ್ ನಲ್ಲಿ ಪ್ರಮುಖವಾಗಿದೆ.

2021ರ ಮೊದಲಾರ್ಧದಲ್ಲಿ 138.8 ಬಿಲಿಯನ್ ದಿರ್ಹಾಮ್ ಚಿನ್ನದ ವಹಿವಾಟು, 94 ಬಿಲಿಯನ್ ದಿರ್ಹಾಮ್ ಟೆಲಿಕಾಂ, ವಜ್ರಗಳು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 57.3 ಬಿಲಿಯನ್ ದಿರ್ಹಾಮ್ ಹೊಂದಿದೆ. ಆಟೋಮೊಬೈಲ್ ವ್ಯಾಪಾರ 28 ಶತಕೋಟಿ ದಿರ್ಹಾಮ್ ಗಳಷ್ಟಾಗಿದೆ. ದುಬೈನ ತೈಲೇತರ ವಿದೇಶಿ ವ್ಯಾಪಾರ ಈ ವರ್ಷದ ಮೊದಲಾರ್ಧದಲ್ಲಿ ಶೇ.31ರಷ್ಟು ಹೆಚ್ಚಾಗಿದೆ. 2020 ರಲ್ಲಿ 550.6 ಬಿಲಿಯನ್ ದಿರ್ಹಾಮ್ ಗಳಿಂದ 2021 ರಲ್ಲಿ 722.3 ಶತಕೋಟಿ ದಿರ್ಹಾಮ್ ಗೆ ಹೆಚ್ಚಾಗಿದೆ.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

6 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago