ನ್ಯೂಯಾರ್ಕ್: ಕೋವಿಡ್-19 ಲಸಿಕೆಗಳನ್ನು ದಕ್ಷಿಣ ಏಶ್ಯಾದ ಕೆಲವು ರಾಷ್ಟ್ರಗಳಿಗೆ ಸರಬರಾಜು ಮಾಡಿರುವ ಭಾರತವು ನಿಜವಾದ ಸ್ನೇಹಿತ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಬಣ್ಣಿಸಿರುವರು.
ಭಾರತವು ತನ್ನ ಔಷಧ ವಯಲದ ಮೂಲಕ ದಕ್ಷಿಣ ಏಶ್ಯಾದಲ್ಲಿ ಕೋವಿಡ್-19 ಲಸಿಕೆಗಳನ್ನು ಹಂಚಿಕೊಳ್ಳುತ್ತಿದೆ. ಇದು ಶ್ಲಾಘನೀಯ ಕ್ರಮವಾಗಿದೆ. ಭಾರತವು ಕೋವಿಡ್ ವಿರುದ್ಧ ಹೋರಾಡಲು ಜಾಗತಿ ಸಮುದಾಯಕ್ಕೆ ನೆರವಾಗುತ್ತಿದೆ ಎಂದು ಹೇಳಿದರು.
ಭಾರತವು ಈಗಾಗಲೇ ತನ್ನ ನೆರೆಯ ರಾಷ್ಟ್ರಗಳಾದ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಉಚಿತವಾಗಿ ಕೋವಿಡ್-19 ಲಸಿಕೆಗಳನ್ನು ನೀಡಿದೆ.
ಭಾರತದಲ್ಲಿ ಕೂಡ ಕೋವಿಡ್-19 ಲಸಿಕೆ ಕಾರ್ಯಕ್ರಮವು ನಡೆಯುತ್ತಿದೆ. ಎರಡು ಬಗೆಯ ಲಸಿಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ.