ಹೊನೊಯ್ : ಭಾರತದ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಯೆಟ್ನಾಂ ಬುಧವಾರ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಸೇರಿದಂತೆ ಈ ವರೆಗೆ ಒಟ್ಟು 9 ಲಸಿಕೆಗಳ ತುರ್ತು ಬಳಕೆಗೆ ದೇಶ ಅನುಮೋದನೆ ನೀಡಿದೆ ಎಂದು ಎಂದು ವಿಯೆಟ್ನಾಂನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ 1.5 ಕೋಟಿ ಡೋಸ್ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ ವಿಯೆಟ್ನಾಂ ಸರ್ಕಾರ ಜುಲೈನಲ್ಲಿ ಹೇಳಿತ್ತು.