ಬ್ರಿಟನ್: ಬ್ರಿಟನ್ ರಾಣಿ ಎಲಿಜೆಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ ಅವರು ತಮ್ಮ 99ನೇ ವರ್ಷಕ್ಕೆ ವಿಧಿವಶರಾಗಿದ್ದಾರೆ. ಫಿಲಿಪ್ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಾರ್ಚ್ 16 ರಂದು ಬಿಡುಗಡೆಗೊಂಡು ಅರಮನೆಗೆ ತೆರಳಿದ್ದರು.
73 ವರ್ಷಗಳ ಹಿಂದೆ ಎಲಿಜೆಬೆತ್ ಅವರನ್ನು ಪ್ರಿನ್ಸ್ ಫಿಲಿಪ್ ವಿವಾಹವಾಗಿದ್ದು, ಇಂದು ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಅರಮನೆ ಮೂಲಗಳು ಪ್ರಿನ್ಸ್ ಫಿಲಿಪ್ ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ.