Categories: ವಿದೇಶ

ಬೇಡಿಕೆ ಹೆಚ್ಚಿದ ಕೃಷ್ಣಂಪಟ್ಟಣಂನ ಅವರ ಆಯುರ್ವೇದ ಔಷಧಿ, ಆಂಧ್ರ ಸರ್ಕಾರದಿಂದಲೇ ವಿತರಿಸುವ ಚಿಂತನೆ

ನೆಲ್ಲೂರು: ಎಲ್ಲರೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಬಾಕ್ಸಿಂಗ್ ಗಳ ಮೊರೆ ಹೋಗುತ್ತಿದ್ದಾರೆ, ಸ್ವದೇಶಿ ಆಯುರ್ವೇದ ಔಷಧಿಯಲ್ಲಿ ಇದನ್ನು ಗುಣಪಡಿಸುವ ಶಕ್ತಿಯಿದೆ ಎಂದು ತೋರಿಸಿಕೊಟ್ಟ ಆಂಧ್ರಪ್ರದೇಶದ ಕೃಷ್ಣಂಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯನವರ ಕಡೆಗೆ ಎಲ್ಲರ ಗಮನ ಸಾಗುತ್ತಿದೆ. 

 

ಇದಾಗಲೇ ಆಂಧ್ರ ಹೈಕೋರ್ಟ್‌ ಹಾಗೂ ಸರ್ಕಾರದಿಂದಲೂ ಈ ಕೊರೊನಾ ಔಷಧ ವಿತರಣೆಗೆ ಗ್ರೀಸ್‌ ಸಿಗ್ನಲ್‌ ಸಿಕ್ಕಿದ್ದು, ಕೃಷ್ಣಂಪಟ್ಟಣಂನತ್ತ ಜನರು ದೌದಾಡಿಸುತ್ತಿದ್ದಾರೆ. ಈ ಕಾರಣದಿಂದಾಗಿ ಇದಾಗಲೇ ಇಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಡುವೆಯೇ ಜೀವಬೆದರಿಕೆಯಿಂದಾಗಿ ಆನಂದಯ್ಯ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಅಲ್ಲಿಯೇ ಅವರು ಔಷಧ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ.

 

ಬೇರಿಕೆ ಹೆಚ್ಚುತ್ತಿರುವ ಕಾರಣ, ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ಆರಂಭಿಕವಾಗಿ ವಿತರಿಸಲು 5000 ಪ್ಯಾಕ್‌ಗಳನ್ನು ಸಿದ್ಧಪಡಿಸಿರುವ ಆನಂದಯ್ಯನವರು, ಈ ಕುರಿತು ಮುಖ್ಯಮಂತ್ರಿ ಜಗನ್‌ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

 

ಇದರ ನಡುವೆಯೇ ಇವರ ಔಷಧವನ್ನು ಸ್ವಯಂಸೇವಕರು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇದು ಸದ್ಯ ಆಂಧ್ರಪ್ರದೇಶದಲ್ಲಿ ಮಾತ್ರ ನಡೆಯುತ್ತಿದೆ. ಈ ಔಷಧಕ್ಕೆ ಇಷ್ಟು ಪರಿಯಲ್ಲಿ ಡಿಮಾಂಡ್‌ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರದ ಸರ್ಕಾರ, ವಿವಿಧ ಭಾಗಗಳಲ್ಲಿಯೂ ಈ ಔಷಧ ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.

 

 ಟಿಟಿಡಿ (ತಿರುಪತಿ ತಿರುಮಲ ಟ್ರಸ್ಟ್‌) ಮೂಲಕ ಇದನ್ನು ವಿತರಣೆ ಮಾಡಲು ಸಾಧ್ಯವೇ ಎಂದು ನೋಡುತ್ತಿದೆ. ದೇಶಾದ್ಯಂತ ಟಿಟಿಡಿಯ ಘಟಕಗಳು ಹಾಗೂ ಟಿಕೆಟ್‌ ಬುಕಿಂಗ್‌ ಕೇಂದ್ರಗಳು ಇರುವ ಹಿನ್ನೆಲೆಯಲ್ಲಿ ಇದರ ಮೂಲಕ ಪೂರೈಕೆಯ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.

 

 

Desk

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

6 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

7 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

7 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

7 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

8 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

8 hours ago