ಮುಜಾಫರ್ ನಗರ: ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳಿಗೆ ಪರಿಚಯವಾದ ಯುವಕನೊಬ್ಬ ಆಕೆಯನ್ನು ತನ್ನ ಸೋದರನ ಜತೆಗೆ ಸೇರಿ ಅತ್ಯಾಚಾರ ಮಾಡಿ ಬಲವಂತದ ಮದುವೆಯಾಗಿರುವ ಘಟನೆಯು ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
23 ವರ್ಷದ ಯುವತಿಯು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಫೇಸ್ ಬುಕ್ ನಲ್ಲಿ ಪರಿಚಯವಾದ ಸೋನು ಎಂಬ ಯುವಕ ತನ್ನನ್ನು ಹೋಟೆಲ್ ಗೆ ಕರೆಸಿಕೊಂಡು, ಅಲ್ಲಿ ಆತನ ಸೋದರನ ಜತೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎಂದು ದೂರಿದ್ದಾಳೆ.
ಇಷ್ಟು ಮಾತ್ರವಲ್ಲದೆ ಅತ್ಯಾಚಾರದ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಬಲವಂತದ ಮದುವೆಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಯುವತಿ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೋನು ಮತ್ತು ಆತನ ಕುಟುಂಬದ ಹತ್ತು ಮಂದಿ ಸದಸ್ಯರ ವಿರುದ್ಧ ಕೇಸು ದಾಖಲಿಸಿದ್ದಾರೆ.