News Karnataka Kannada
Wednesday, May 15 2024
ವಿದೇಶ

ಪಾಕ್ ತಂಡಕ್ಕೆ ಆಫರ್: ಬರ್ಗರ್ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ ಝೊಮಾಟೊ

Photo Credit :

ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಇತ್ತ ಫುಡ್​ ಡೆಲಿವರಿ ಕಂಪೆನಿ ಝೊಮಾಟೊ ಪಾಕ್ ತಂಡದ ಕಾಲೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಪಾಕಿಸ್ತಾನ್ ತಂಡಕ್ಕೆ ಇಂದು ರಾತ್ರಿ ಬರ್ಗರ್ ಅಥವಾ ಪಿಜ್ಜಾ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಪಾಕ್ ತಂಡದ ಅಧಿಕೃತ ಟ್ವಿಟರ್​ ಅಕೌಂಟ್​ಗೆ ಟ್ಯಾಗ್​ ಮಾಡಿ ಕಿಚಾಯಿಸಿದ್ದಾರೆ.

ಝೊಮಾಟೊ ಈ ರೀತಿಯಾಗಿ ಪಾಕ್ ತಂಡವನ್ನು ಕಿಚಾಯಿಸಲು ಮುಖ್ಯ ಕಾರಣ 2019 ರ ಏಕದಿನ ವಿಶ್ವಕಪ್.  ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಪಾಕ್ ಆಟಗಾರರು ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಪಿಜ್ಜಾ-ಬರ್ಗರ್ ಸೇವಿಸುತ್ತಾ ಸಮಯ ಕಳೆದಿದ್ದರು ಎಂದು ಆರೋಪಿಸಲಾಗಿತ್ತು.

ಹೀಗಾಗಿ ಅದನ್ನೇ ಪ್ರಸ್ತಾಪಿಸಿ ಇಂದು ಭಾರತದ ವಿರುದ್ದ ಸೋತ ಬಳಿಕ ಪಾಕ್ ತಂಡಕ್ಕೆ ಪಿಜ್ಜಾ ಅಥವಾ ಬರ್ಗರ್ ಬೇಕಿದ್ದರೆ ಝೊಮಾಟೊವನ್ನು ಸಂಪರ್ಕಿಸಿ ಎಂದು ಕಾಲೆಳೆದಿದ್ದಾರೆ.

ಇನ್ನೊಂದೆಡೆ ಪಾಕಿಸ್ತಾನದ ಫುಡ್​ ಡೆಲಿವರಿ ಕಂಪೆನಿ ಕರೀಮ್ ಪಾಕಿಸ್ತಾನ್ ಕೂಡ ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.’ಮುಫ್ತ್ ಖನೇ ಕಾ ಮೌಕಾ ಭೀ ಔರ್ ಜೀತ್ನೆ ಕಾ ಮೌಕಾ ಭಿ (ಉಚಿತವಾಗಿ ತಿನ್ನುವ ಅವಕಾಶ ಮತ್ತು ಗೆಲ್ಲುವ ಅವಕಾಶ) ಎಂದು ಟ್ವೀಟ್ ಮಾಡಿ ಆಫರ್ ನೀಡಿದೆ. ಪಾಕಿಸ್ತಾನ-ಭಾರತ ನಡುವಣ ಪಂದ್ಯದ ವೇಳೆ ಫುಡ್​ ಆರ್ಡರ್​ ಮಾಡಿ. ಭಾರತದ ವಿರುದ್ದ ಪಾಕ್ ಗೆದ್ದರೆ ನೀವು ಆರ್ಡರ್ ಮಾಡಿದ ಮೊತ್ತವನ್ನು ಹಿಂತಿರುಗಿಸುತ್ತೇವೆ ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು