ಮುಂಬೈ: ಭೂಷಣ್ ಸ್ಟೀಲ್ ಉಕ್ಕು ಕಂಪೆನಿಯು ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಮೂರು ಸಾವಿರ ಕೋಟಿ ರೂ. ವಂಚನೆ ಮಾಡಿರುವ ಪ್ರಕರಣವು ಬೆಳಕಿಗೆ ಬಂದಿದೆ.
ಬ್ಯಾಂಕ್ ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸೇಂಜ್ ಗೆ ಈಗಾಗಲೇ ಲಿಖಿತ ಮಾಹಿತಿ ನೀಡಿದೆ. ದುಬೈ ಶಾಖೆಯಿಂದ 345.74 ಕೋಟಿ, ಹಾಂಕಾಂಗ್ ಶಾಖೆಯಿಂದ 267.9 ಕೋಟಿ ಮತ್ತು ಚಂಡೀಗಢ ಶಾಖೆಯಿಂದ 3,191.51 ಕೋಟಿ ರೂ. ವಂಚಿಸಿದೆ ಎಂದು ಹೇಳಿದೆ.
ಭೂಷಣ್ ಕಂಪೆನಿಯು ಲೆಕ್ಕಪತ್ರಗಳಲ್ಲಿ ವಂಚನೆ ಮಾಡಿ ಬ್ಯಾಂಕ್ ಒಕ್ಕೂಟದಿಂದ ಹಣ ಪಡೆದಿದೆ ಎಂದು ಪಿಎನ್ ಬಿ ಆರೋಪಿಸಿದೆ.
ಇದೇ ಬ್ಯಾಂಕ್ ಗೆ ಉದ್ಯಮಿ ನೀರವ್ ಮೋದಿ ಸುಮಾರು 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪಲಾಯನಗೈದಿದ್ದರು.