ವಿದೇಶ

ತೈವಾನ್ ಪ್ರಮುಖ ಬಂದರು, ವಿಮಾನ ನಿಲ್ದಾಣಗಳನ್ನು ಚೀನಾ ವಶಪಡಿಸಿಕೊಳ್ಳುವ ಆತಂಕ

ಚೀನಾದ ಸಶಸ್ತ್ರ ಪಡೆಗಳು ತೈವಾನ್‌ನ ಪ್ರಮುಖ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ವಶಕ್ಕೆ ಪಡೆಯಬಹುದು ಎನ್ನುವ ಆತಂಕವನ್ನು ತೈವಾನ್ ವ್ಯಕ್ತಪಡಿಸಿದೆ.

ಪ್ರಜಾಸತ್ತಾತ್ಮಕ ತೈವಾನ್‌ನ್ನು ತನ್ನ ನಿಯಂತ್ರಣಕ್ಕೆ ತರುವ ಚೀನಾದ ಪ್ರಯತ್ನ ಎಂದಿಗೂ ಕಡಿಮೆಯಾಗಿಲ್ಲ. ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ಪದೇ ಪದೆ ಯುದ್ಧ ವಿಮಾನಗಳನ್ನು ಹಾರಿಸುವುದು ಹಾಗೂ ದ್ವೀಪದ ಸುತ್ತಮುತ್ತ ಮಿಲಿಟರಿ ಚಟುವಟಿಕೆಯನ್ನು ಚೀನಾ ಹೆಚ್ಚು ಮಾಡುತ್ತಿದೆ.

ಈ ಹಿಂದೆ ಚೀನಾ ವಾಯು ರಕ್ಷಣಾ ಗುರುತಿಸುವಿಕೆಯ ವಲಯದಲ್ಲಿ ಚೀನೀ ಯುದ್ಧ ವಿಮಾನಗಳನ್ನು ಒಳನುಗ್ಗಿಸಿತ್ತು. ಈ ಹಿನ್ನೆಲೆಯಲ್ಲಿ ತೈವಾನ್‌ನ ರಕ್ಷಣಾ ಸಚಿವಾಲಯವು ತನ್ನ ವರದಿಯಲ್ಲಿ ಚೀನಾ ಗ್ರೇ ಝೋನ್ ಎಂಬ ಯುದ್ಧವನ್ನು ಈಗಾಗಲೇ ಆರಂಭಿಸಿದೆ ಎಂದು ಹೇಳಿಕೊಂಡಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) 2035 ವೇಳೆಗೆ ತನ್ನ ಪಡೆಗಳ ಆಧುನೀಕರಣ ಪೂರ್ಣಗೊಳಿಸುವ ಗುರಿ ಹೊಂದಿದೆ. ತೈವಾನ್ ವಿರುದ್ಧದ ಸಂಭವನೀಯ ಕಾರ್ಯಾಚರಣೆಗಳಲ್ಲಿ ಶ್ರೇಷ್ಠತೆ ಕಾಯ್ದುಕೊಳ್ಳಲು, ವಿದೇಶಿ ಪಡೆಗಳು ತೈವಾನ್‌ನ ಸಹಾಯಕ್ಕೆ ಬಂದರೂ, ಅವುಗಳನ್ನು ಮೀರಿಸುವ ಸಾಮರ್ಥ್ಯ ಪಡೆಯುವಲ್ಲಿ ಚೀನಾ ತನ್ನ ಬಲವನ್ನು ವೃದ್ಧಿಸಿಕೊಳ್ಳಲಿದೆ. ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲನ್ನು ಒಡ್ಡಲಿದೆ ಎಂದು ತೈವಾನ್ ಸಚಿವಾಲಯ ತಿಳಿಸಿದೆ.

ಪ್ರಸ್ತುತ ಪಿಎಲ್‌ಎಗೆ ನಮ್ಮ ನಿರ್ಣಾಯಕ ಬಂದರುಗಳು, ವಿಮಾನನಿಲ್ದಾಣಗಳು ಮತ್ತು ಹೊರಹೋಗುವ ವಿಮಾನ ಮಾರ್ಗಗಳ ವಿರುದ್ಧ ಜಂಟಿ ದಿಗ್ಭಂದನ ಹಾಕುವ ಆತಂಕವಿದೆ. ಅಲ್ಲದೇ ನಮ್ಮ ವಾಯು ಮತ್ತು ಸಮುದ್ರ ಸಂವಹನ ಕಡಿತಗೊಳಿಸಿ, ಮಿಲಿಟರಿ ಸರಬರಾಜಿನ ಮೇಲೂ ಚೀನಾ ಪರಿಣಾಮ ಬೀರಲಿದೆ ಎಂದು ಸಚಿವಾಲಯ ತಿಳಿಸಿದೆ.

Sneha Gowda

Recent Posts

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

1 min ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

19 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

47 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago