Categories: ವಿದೇಶ

ತಾಲಿಬಾನಿಗಳಿಗೆ ಹಿನ್ನಡೆ ಉಂಟು ಮಾಡಿರುವ ಪಂಜ್‌ ಶೀರ್‌ ಪ್ರಾಂತ್ಯ

ಕಾಬೂಲ್, ; ರಾಜಧಾನಿ ಕಾಬೂಲ್ ಸೇರಿದಂತೆ ಆಫ್ಘಾನಿಸ್ತಾನದ ಬಹುತೇಕ ಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು, ತಮಗೆ ಸಡ್ಡು ಹೊಡೆದಿರುವ ಪಂಜ್‍ಶೀರ್ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಯುದ್ಧ ಸಾರಿದ್ಧಾರೆ. ಈ ನಡುವೆ ಕಾಬೂಲ್‍ನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಿಂದ ಆಫ್ಘನ್ ಸೇನೆಯ ಒರ್ವ ಮೃತಪಟ್ಟಿದ್ಧಾರೆ.
ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊರ ದೇಶಗಳಿಗೆ ತೆರಳಲು ಸಾವಿರಾರು ಮಂದಿ ಸೇರಿದ್ದಾರೆ. ಅಲ್ಲಿಗೆ ಅಪರಿಚಿತರು ನುಗ್ಗಿದ್ದು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಆಫ್ಘನಿಸ್ತಾನದ ರಕ್ಷಣಾ ಪಡೆಗಳು ಪ್ರತಿ ದಾಳಿ ನಡೆಸಿವೆ. ಈ ಚಕಮಕಿಯಲ್ಲಿ ಆಫ್ಘಾನಿಸ್ತಾನದ ರಕ್ಷಣಾ ಪಡೆಯ ಒಬ್ಬರು ಮೃತ ಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ಜರ್ಮಿನಿಯ ಸೇನಾಪಡೆ ಹೇಳಿದೆ. ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‍ಘನಿ ದೇಶ ಬಿಟ್ಟು ಪರಾರಿಯಾದ ಬಳಿಕ ಕಾಬೂಲ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ತಾಲಿಬಾನಿಗಳು ತಮ್ಮ ಹಿಡಿತ ಸಾಧಿಸಿದ್ದಾರೆ. ಆದರೆ ಕೆಲವು ರಾಜ್ಯಗಳಲ್ಲಿ ತಾಳಿಬಾನಿಗಳಿಗೆ ಪ್ರತಿರೋಧ ವ್ಯಕ್ತವಾಗಿವೆ. ಮೂರು ಜಿಲ್ಲೆಗಳು ಸಂಪೂರ್ಣ ತಾಲಿಬಾನಿಗಳಿಂದ ಮುಕ್ತವಾಗಿದೆ ಎಂದು ಕಳೆದ ಎರಡು ದಿನಗಳ ಹಿಂದಷ್ಟೇ ಸ್ಥಳೀಯರು ಘೋಷಿಸಿದ್ದರು.
ಉತ್ತರ ವಲಯದ ಜನರು ತಾಲಿಬಾನಿಗಳ ವಿರುದ್ಧ ಸೆಟೆದು ನಿಂತಿದ್ದು, ಪಂಜಶೀರ್ ಕಣಿವೆಯ ಮೂರು ಜಿಲ್ಲೆಗಳನ್ನು ಬಂಡುಕೋರರಿಂದ ಬಿಡಿಸಿಕೊಂಡಿದ್ದೇವೆ. ಮಾಜಿ ರಾಜ್ಯಪಾಲರ ನೇತೃತ್ವದಲ್ಲಿ ಆಫ್ಘಾನಿಸ್ತಾನದ ರಕ್ಷಣಾ ಪಡೆಗಳು ಒಗ್ಗೂಡಿವೆ ಎಂದು ಹೇಳಲಾಗಿತ್ತು. ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಉಸ್ತುವಾರಿ ಅಧ್ಯಕ್ಷರೆಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದು, ಪಂಜ್‍ಶೀರ್ ಭಾಗವನ್ನು ವಶ ಪಡಿಸಿಕೊಳ್ಳಲು ಅಪಾರ ಪ್ರಮಾಣದ ತಾಲಿಬಾನ್ ಪಡೆಗಳು ಆ ಪ್ರದೇಶವನ್ನು ಸುತ್ತುವರೆದಿದೆ. ತಾಲಿಬಾನಿಗಳ ವಿರುದ್ಧದ ಶಕ್ತಿಗಳನ್ನು ಮುಲ್ಲಾಜಿಲ್ಲದೆ ಮಟ್ಟ ಹಾಕಲಾಗುವುದು ಎಂದು ಘೋಷಿಸಿದ್ದಾರೆ.

Indresh KC

Recent Posts

ರೇವಣ್ಣ ಕಿಡ್ನಾಪ್ ಕೇಸ್​ : ಜಾಮೀನು ಅರ್ಜಿ ವಿಚಾರಣೆ ​ಮುಂದೂಡಿದ ಕೋರ್ಟ್​

ಪ್ರಜ್ವಲ್ ರೇವಣ್ಣ ಪೆನ್​ ಡ್ರೈವ್ ಕೇಸ್​ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್​ ಡಿ ರೇವಣ್ಣ ಎಸ್​ಐಟಿ…

2 mins ago

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು  ಕಾಮಾಕ್ಯ ದೇವಸ್ಥಾನಕ್ಕೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು…

13 mins ago

ಎಚ್ಚರ! ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು : ಐವರು ಅಸ್ವಸ್ಥ

ಚಿಕನ್‌ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ…

15 mins ago

ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಅಭಿಯಾನ

ಜಿಲ್ಲೆಯ ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಮೇ8ರಂದು ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ.

23 mins ago

ಪೆನ್‌ಡ್ರೈವ್‌ ಪ್ರಕರಣದಲ್ಲಿ 3-4 ಆತ್ಮಹತ್ಯೆ : ಜೆಡಿಎಸ್‌ ನಾಯಕ ಸ್ಫೋಟಕ ಮಾಹಿತಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ಜೆಡಿಎಸ್‌ ನಾಯಕ, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಅವರು…

27 mins ago

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು…

44 mins ago