News Karnataka Kannada
Thursday, May 02 2024
ವಿದೇಶ

ಡೆಲ್ಟಾ ರೂಪಾಂತರ ಸೋಂಕು: ಕ್ಯಾನ್‌ಬೆರಾದಲ್ಲಿ ಲಾಕ್‌ಡೌನ್‌ ವಿಸ್ತರಣೆ

Lockdown 31072021
Photo Credit :

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೊಸದಾಗಿ 22 ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ.

ಈ ಹಿಂದೆ ಸಿಡ್ನಿಯಲ್ಲಿ ಕೊರೊನಾದ ಡೆಲ್ಟಾ ರೂಪಾಂತರ ಸೋಂಕಿನ ಒಂದು ಪ್ರಕರಣ ಪತ್ತೆಯದಾಗ ಆಗಸ್ಟ್‌ 12 ರಿಂದ ಲಾಕ್‌ಡೌನ್ ಘೋಷಿಸಲಾಗಿತ್ತು. ನಂತರ ಅದನ್ನು ಮುಂದುವರಿಸಲಾಗಿತ್ತು. ಈಗ ಪುನಃ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಮುಖ್ಯಮಂತ್ರಿ ಆಂಡ್ರೀವ್‌ ಬಾರ್‌, ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.

ಕ್ಯಾನಬೆರಾವನ್ನು ನ್ಯೂ ಸೌತ್ ವೇಲ್ಸ್ ರಾಜ್ಯ ಸುತ್ತುವರಿದಿದೆ. ಈ ರಾಜ್ಯದ ಲಿಮೌಸಿನ್‌ ನಗರದಲ್ಲಿ ಜೂ. 16ರಂದು ಟ್ಯಾಕ್ಸಿ ಚಾಲಕನೊಬ್ಬನಲ್ಲಿ ಕೋವಿಡ್‌–ಡೆಲ್ಟಾ ರೂಪಾಂತರ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಜೂ. 26 ರಿಂದ ಸಿಡ್ನಿ ನಗರವನ್ನು ಲಾಕ್‌ಡೌನ್‌ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು