News Karnataka Kannada
Sunday, May 19 2024
ವಿದೇಶ

ಜಿಎಸ್ಟಿ ವ್ಯವಸ್ಥೆ : ರೈಲ್ವೆ ಪ್ರಯಾಣ ದರದ ಮೇಲೆ ಪರಿಣಾಮ

Photo Credit :

ಜಿಎಸ್ಟಿ ವ್ಯವಸ್ಥೆ : ರೈಲ್ವೆ ಪ್ರಯಾಣ ದರದ ಮೇಲೆ ಪರಿಣಾಮ

ಹೊಸದಿಲ್ಲಿ: ಇಂದಿನಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ರೈಲ್ವೆ ಪ್ರಯಾಣ ದರದ ಮೇಲೆ ಪರಿಣಾಮ ಬೀರಿದೆ. ಪ್ರಥಮ ದರ್ಜೆ ಹಾಗೂ ಎಸಿ ದರ್ಜೆಯ ಟ್ರೈನ್ಗಳ ಪಯಣದಲ್ಲಿ ಏರಿಕೆ ಕಂಡು ಬರಲಿದೆ.

ರೈಲ್ವೆ ಇಲಾಖೆಯ ಮೂಲಗಳ ಪ್ರಥಮ ದರ್ಜೆ ಹಾಗೂ ಎಸಿ ಟ್ರೈನ್ಗಳ ಪಯಣದಲ್ಲಿ ಶೇ.5ರಿಂದ 4.5ರಷ್ಟು ಪ್ರಮಾಣ ಏರಿಕೆಯಾಗಲಿದೆ. ಆದರೆ, ನಾನ್ ಎಸಿ ಮತ್ತು ಲೋಕಲ್ ಟ್ರೈನ್ಗಳು, ಮೆಟ್ರೊ ಹಾಗೂ ಧಾರ್ಮಿಕ ಯಾತ್ರೆ ಟ್ರೈನ್ಗಳ ಪ್ರಯಾಣಕ್ಕೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದ್ದು, ಇವುಗಳಲ್ಲಿ ಯಾವುದೇ ಬದಲಾವಣೆ ಕಂಡು ಬರುವ ಸಾಧ್ಯತೆ ಇಲ್ಲ. ಒಂದು ದೇಶ ಒಂದೇ ತೆರಿಗೆ: ದೇಶದ ಬಹುದೊಡ್ಡ ಆರ್ಥಿಕ ಸುಧಾರಣಾ ಕ್ರಮ ಜಿಎಸ್ಟಿ ಜಾರಿ ಜೊತೆಗೆ ಸರಕು ಸಾಗಣೆ ಮೇಲೂ ಜಿಎಸ್ಟಿ ಪರಿಣಾಮ ಬೀರಲಿದ್ದು, ಇದರಲ್ಲೂ ಕೂಡ ಶೇ.5ರಿಂದ 4.5ರಷ್ಟು ಹೆಚ್ಚಳವಾಗಲಿದೆ. ಇಲ್ಲಿ ಕೂಡ ಅಗತ್ಯ ಸರಕುಗಳಾದ ಹಾಲು, ಕೃಷಿ ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಇರುತ್ತದೆ. ಈ ಸಂಬಂಧ ರೈಲ್ವೆ ಇಲಾಖೆ ಈಗಾಗಲೇ ರೈಲ್ವೆ ವಿಭಾಗಗಳಿಗೆ ಸೂಚನೆಯನ್ನು ಹೊರಡಿಸಿದೆ ಎಂದು ಮೂಲಗಳ ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು