ಚಿತ್ರದುರ್ಗ, ; ಕೊರೊನಾ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನಟ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನರ ಮೆಚ್ಚುಗೆಯನ್ನು ಅವರುಗಳಿಸಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೂ ಅವರು ಸಹಾಯ ಹಸ್ತ ಚಾಚಿದ್ದಾರೆ.ದೇಶದ ವಿವಿಧ ರಾಜ್ಯಗಳಿಂದ ನೆರವಿಗಾಗಿ ಬೇಡಿಕೆ ಬಂದರೆ ಕೂಡಲೇ ಸ್ಪಂದಿಸುತ್ತಾ ಜೀವ ಉಳಿಸುವ ಕೆಲಸ ಮಾಡುತ್ತಿದೆ ನಟ ಸೋನು ಸೂದ್ ತಂಡ. ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಸಹಾಯ ಮಾಡುತ್ತಿದೆ ಈ ತಂಡ. ಕೆಲವು ದಿನಗಳ ಹಿಂದೆ ಕ್ರಿಕೆಟಿಗ ಸುರೇಶ್ ರೈನಾಗೆ ನೆರವಾಗಿದ್ದರು.
ಇದೀಗ ಮತ್ತೊಬ್ಬ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಮನವಿಗೆ ಸ್ಪಂದಿಸಿದ್ದಾರೆ ಸೋನು ಸೂದ್. ಅದರಲ್ಲೂ ಹರ್ಭಜನ್ ಸಿಂಗ್ ಮನವಿ ಮಾಡಿದ್ದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಾಗಿ.
ಚಿತ್ರದುರ್ಗದ ಬಸಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ರೆಮಿಡಿಸಿವರ್ ಚುಚ್ಚುಮದ್ದಿನ ಸಹಾಯ ಕೋರಿ ಹರ್ಭಜನ್ ಸಿಂಗ್ ಟ್ವಿಟ್ ಮಾಡಿದ್ದರು. ಜೊತೆಗೆ ಆ ವ್ಯಕ್ತಿಯ ಮಾಹಿತಿ, ದೂರವಾಣಿ ಸಂಖ್ಯೆಯನ್ನು ನೀಡಿದ್ದರು.ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ ಸಹಾಯ ತಲುಪುತ್ತದೆ ಎಂದು ಹೇಳಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಸೋನು ಸೂದ್ ತಂಡದ ಸಿಬ್ಬಂದಿ ಇಂಜೆಕ್ಷನ್ ತಲುಪಿಸಿ ಸೋಂಕಿತನಿಗೆ ನೆರವು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ನಟ ಸೋನು ಸೂದ್ ತಂಡದ ಸಹಾಯ ಹಸ್ತ ಸಿಕ್ಕಿರುವುದು ಸಂತೋಷದ ಸಂಗತಿಯಾಗಿದೆ.
ಚಿತ್ರದುರ್ಗದ ರೋಗಿಗೆ ರೆಮಿಡಿಸಿವಿರ್ ತಲುಪಿಸಿದ ಸೋನು ಸೂದ್ ತಂಡ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.