News Karnataka Kannada
Monday, April 29 2024
ವಿದೇಶ

ಚಂಡಮಾರುತ ಪ್ರಭಾವ: ತೈವಾನ್‌ನಲ್ಲಿ ಜನಜೀವನ ಅಸ್ತವ್ಯಸ್ತ

Taiwan 12092021
Photo Credit :

ತೈವಾನ್‌: ಪೂರ್ವ ತೈವಾನ್‌ನಲ್ಲಿ ‘ಚಂತು’ ಚಂಡಮಾರುತ ಪ್ರಭಾವದಿಂದಾಗಿ ಭಾನುವಾರ ಬಿರುಸಿನ ಗಾಳಿ ಮತ್ತು ಮಳೆ ಸುರಿದಿದೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದ್ದು, ಹಲವೆಡೆ ವಿದ್ಯುತ್‌ ಕಡಿತವೂ ಉಂಟಾಗಿದೆ.

ಚಂತು ಚಂಡಮಾರುತವು ತೈವಾನ್‌ನ ಪೂರ್ವ ಕರಾವಳಿಯನ್ನು ಅಪ್ಪಳಿಸಿತು. ಸದ್ಯ ಚಂಡಮಾರುತ ಉತ್ತರಕ್ಕೆ ಚಲಿಸುತ್ತಿದೆ ಎಂದು ಅಲ್ಲಿನ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದಿಂದಾಗಿ ಈವರೆಗೆ ಒಟ್ಟು 159 ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ .26,000 ಮನೆಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ತೊಡಕು ಉಂಟಾಗಿದೆ ಎಂದು ಕೇಂದ್ರೀಯ ತುರ್ತು ಕಾರ್ಯಾಚರಣೆ ಕೇಂದ್ರವು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು