ನವದೆಹಲಿ: ದೇಶದಾದ್ಯಂತ 24 ಗಂಟೆಗಳಲ್ಲಿ 73,272 ಹೊಸ ಪ್ರಕರಣಗಳು ದೃಢಪಟ್ಟಿದ್ದು, 926 ಸೋಂಕಿತರು ಮೃತಪಟ್ಟಿದ್ದಾರೆ.
ಈ ವರೆಗೂ ಒಟ್ಟು ಸೋಂಕಿತರ ಸಂಖ್ಯೆ 69,79,424ಕ್ಕೆ ಏರಿಕೆಯಾಗಿದ್ದು, ಆ ಪೈಕಿ 1,07,416 ಮಂದಿ ಮೃತಪಟ್ಟಿದ್ದಾರೆ. 58,27,705 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 8,83,185 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 9ರ ವರೆಗೂ ಒಟ್ಟು 8,57,98,698 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 11,64,018 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಯಿತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.
ಭಾರತದಲ್ಲಿ ಕೋವಿಡ್ ಕೇಂದ್ರಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ಒಟ್ಟು 14,93,884 ಪ್ರಕರಣಗಳು ವರದಿಯಾಗಿದ್ದು, 39,430 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.