ಮುಜಾಫರ್ ನಗರ: ಕೋತಿಗಳ ಗುಂಪೊಂದು ಓಡಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಬಾಲಕಿಯು ತಪ್ಪಿಸಲು ಹೋದ ವೇಳೆ ಮನೆಯ ಛಾವಣಿಯಿಂದ ಬಿದ್ದ ಮೃತಪಟ್ಟಿರುವ ಘಟನೆಯು ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಭೋಪಾ ಠಾಣಾ ವ್ಯಾಪ್ತಿಯ ನಾಲಿ ಗ್ರಾಮದಲ್ಲಿ ಎಂಟನೇ ತರಗತಿ ಓದುತ್ತಿದ್ದ 13ರ ಹರೆಯದ ಬಾಲಕಿಯನ್ನು ಮಂಗಗಳ ಗುಂಪೊಂದು ಓಡಿಸಿಕೊಂಡು ಬಂದಾಗ ಆಕೆ ತಪ್ಪಿಸಲು ಓಡಿ ಛಾವಣೆಯಿಂದ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.