ಶ್ರೀನಗರ : ಉತ್ತರ ಕಾಶ್ಮೀರದ ಸೋಪೋರ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ .
ಇನ್ನು ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿವೆ ಎಂದು ಮೂಲಗಳು ತಿಳಿಸಿವೆ . ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ . ಇಡೀ ಪ್ರದೇಶವನ್ನು ಭದ್ರತಾಪಡೆ ಸುತ್ತುವರಿದಿದೆ.
ಹೆಚ್ಚಿನ ಪಡೆಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ . ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಅರೆ ಸೇನಾಪಡೆಗಳ ನಿಯೋಜನೆ ಹೆಚ್ಚಿಸಲಾಗಿದೆ . ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಯೋಧರು ಮತ್ತೇ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.