ಆಸ್ಟ್ರೇಲಿಯಾ : ಡಾಮಿನೋಸ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಲ್ಲಂಗಡಿ ಪಿಜ್ಜಾದ ತಯಾರಿ ವಿಡಿಯೋವನ್ನು ಹಂಚಿಕೊಂಡಿದೆ. ಕಲ್ಲಂಗಡಿಯನ್ನು ಕೊರೆದು ಅದರ ಮೇಲೆ ಬಾರ್ಬೆಕ್ಯೂ ಸಾಸ್, ಚೀಸ್, ಪೇಪ್ರೊನಿ ಸ್ಲೈಸ್ಗಳಿಂದ ಟಾಪಿಂಗ್ ಮಾಡಿರುವ ವಿಡಿಯೋವನ್ನು ಓಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ವವೇ ಪಿಜ್ಜಾವನ್ನು ಬಹುಮೆಚ್ಚಿಕೊಂಡು ಸೇವಿಸುತ್ತಾರೆ. ಹೆಚ್ಚಿನ ಬಾಣಸಿಗರು ಪಿಜ್ಜಾದಲ್ಲಿ ಬೇರೆ ಬೇರೆ ಪಾಕ ವೈವಿಧ್ಯಗಳ ಪರೀಕ್ಷೆಯನ್ನು ಮಾಡಿದ್ದು ಪಿಜ್ಜಾ ಪ್ರೇಮಿಗಳು ಈ ಎಲ್ಲಾ ವೈವಿಧ್ಯತೆಗಳನ್ನು ಸ್ವಾಗತಿಸಿದ್ದಾರೆ. ಆದರೆ, ಈ ಕಲ್ಲಂಗಡಿ ಪಿಜ್ಜಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ದೊರೆತಿದ್ದು ಹೆಚ್ಚಿನ ಪಿಜ್ಜಾ ಪ್ರೇಮಿಗಳಿಗೆ ಇದು ಅಷ್ಟೊಂದು ರುಚಿಸಲಿಲ್ಲ ಎಂಬುದಂತೂ ಪಕ್ಕಾ ಆಗಿದೆ.
ಹಣ್ಣಿನ ಪಿಜ್ಜಾ ತಯಾರಿಕೆಗಾಗಿ ಪೈನಾಪಲ್, ಕಿವಿ, ಸ್ಟ್ರಾಬೆರಿ, ಚಾಕೊಲೇಟ್ ಬಳಸಿ ಯಾವುದೇ ಕಸ್ಟಮೈಸೇಶನ್ ಅನ್ವೇಷಿಸಲಾಗಿಲ್ಲ. ಆದರೆ ಕಲ್ಲಂಗಡಿ ಬಳಸಿ ತಯಾರಿಸಿದ ಪಿಜ್ಜಾವನ್ನು ಜಾಗತಿಕವಾಗಿ ಪಿಜ್ಜಾ ಪ್ರಿಯರು ಸ್ವಾಗತಿಸಿಲ್ಲ ಎಂಬುದಂತೂ ನಿಜವಾಗಿದೆ. ಪಿಜ್ಜಾ ಪ್ರೇಮಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.