News Karnataka Kannada
Monday, May 20 2024
ವಿದೇಶ

ಎರಡು ವಾರ ಬಳಿಕ ಗುಹೆಯಿಂದ ಹೊರಬಂದ ಫುಟ್ಬಾಲ್ ಆಟಗಾರರು!

Photo Credit :

ಎರಡು ವಾರ ಬಳಿಕ ಗುಹೆಯಿಂದ ಹೊರಬಂದ ಫುಟ್ಬಾಲ್ ಆಟಗಾರರು!

ಥಾಯ್ಲೆಂಡ್: ಕಳೆದ ಎರಡು ವಾರಗಳಿಂದ ಥಾಯ್ಲೆಂಡ್ ನ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ತಂಡದ 12 ಮಂದಿ ಆಟಗಾರರು ಮತ್ತು ಕೋಚ್ ನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ವರದಿಗಳು ಹೇಳಿವೆ.

ಥಾಯ್ಲೆಂಡ್ ನ ನೇವಿ ಸೀಲ್ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮಂಗಳವಾರ ರಕ್ಷಣಾ ಕಾರ್ಯವು ಪೂರ್ಣಗೊಂಡಿದೆ ಎಂದು ವರದಿಗಳು ತಿಳಿಸಿವೆ.

12 ಮಂದಿ ಬಾಲಕರು ಮತ್ತು ಅವರ ಕೋಚ್ ನ್ನು ಗುಹೆಯಿಂದ ಹೊರತರಲಾಗಿದೆ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂದು ಥಾಯ್ಲೆಂಡ್ ನ ನೇವಿ ಸೀಲ್ ಹೇಳಿದೆ.

ಜೂನ್ 23ರಂದು ವೈಲ್ಡ್ ಬೋಯರ್ಸ್ ತಂಡದ 12 ಮಂದಿ ಆಟಗಾರರು ಮತ್ತು ಕೋಚ್ ಥಾಯ್ಲೆಂಡ್ ನ ಚಿಯಾಂಗ್ ರಾಯ್ ನ ಉತ್ತರ ಪ್ರಾಂತ್ಯದಲ್ಲಿರುವ ಗುಹೆಯೊಳಗೆ ಹೋಗಿ ಸಿಲುಕಿಕೊಂಡಿದ್ದರು. ಭಾರೀ ಮಳೆಯಾಗಿ ಪ್ರವಾಹ ಉಂಟಾದ ಪರಿಣಾಮ ಹೊರಬರಲು ಸಾಧ್ಯವಾಗಿರಲಿಲ್ಲ.

ಬ್ರಿಟನ್ ನಿಂದ ಬಂದ ಈಜುಗಾರರು 13 ಮಂದಿ ಗುಹೆಯೊಳಗೆ ಜೀವಂತವಾಗಿದ್ದಾರೆ ಎಂದು ಕಳೆದ ಸೋಮವಾರ ಪತ್ತೆ ಹಚ್ಚಿದ್ದರು. ಇದರ ಬಳಿಕ ಅವರಿಗೆ ಆಹಾರ ತಲುಪಿಸುವ ಕಾರ್ಯ ನಡೆದಿತ್ತು. ರಕ್ಷಣಾ ಕಾರ್ಯ ಆರಂಭಿಸಲಾಗಿತ್ತಾದರೂ ಪ್ರವಾಹದಿಂದಾಗಿ ವಿಳಂಬವಾಗಿತ್ತು. ಭಾನುವಾರ ನಾಲ್ಕು ಮಂದಿಯನ್ನು ರಕ್ಷಿಸಿದ್ದರು. ಸೋಮವಾರ ಮತ್ತೆ ನಾಲ್ಕು ಮಂದಿಯನ್ನು ರಕ್ಷಿಸಲಾಗಿತ್ತು. ಮಂಗಳವಾರ ಕೋಚ್ ಮತ್ತು ಉಳಿದ ನಾಲ್ಕು ಮಂದಿಯನ್ನು ಹೊರತರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು