ಬಾರಾಮುಲ್ಲಾ: ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಶನಿವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೈದಿದೆ.
ಬಾರಾಮುಲ್ಲಾದ ಬೊನಿಯರ್ ಪ್ರದೇಶದ ಬುಜಥಾಲನ್ ನಲ್ಲಿ ಈ ಎನ್ ಕೌಂಟರ್ ನಡೆದಿದೆ.
ಸೇನೆ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಹತ್ಯೆ ಮಾಡಿರುವರು. ಈಗಲೂ ಗುಂಡಿನ ದಾಳಿಯು ಮುಂದುವರಿದಿದೆ ಎಂದು ವರದಿಗಳು ಹೇಳಿವೆ.