ತಾಲಿಬಾನ್ ವಿರೋಧಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್) ಪಡೆಯ ಬೆಂಗಲಿಗನ ಮಗುವನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹಿಂಸೆ ನಿಂತಿಲ್ಲ ಎನ್ನುವುದಕ್ಕೆ ಇದು ಸಾಕ್ಷ್ಯವಾಗಿದೆ. ರಿವೇಂಜ್ ಕಿಲ್ಲಿಂಗ್ ನಡೆಸಿ ಮಗುವನ್ನು ಕೊಂದಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಎನ್ಆರ್ಎಫ್ ಬೆಂಬಲಿಗರೊಬ್ಬರು ಪಂಜ್ಶೀರ್ನಲ್ಲಿ ಇರುವುದು ತಿಳಿದ ತಾಲಿಬಾನಿಗಳು ಅವರ ಮಗುವನ್ನು ಹತ್ಯೆ ಮಾಡಿ ದ್ವೇಷ ಸಾಧಿಸಿದ್ದಾರೆ.
ಈ ಬಾರಿ ಅಫ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನ್, ನಾವು ಎಲ್ಲರಂತೆಯೇ ನಮಗೂ ರಕ್ತಪಾತ ಇಷ್ಟ ಇಲ್ಲ ಎಂದು ಹೇಳಿಕೊಂಡಿತ್ತು. ಕ್ರೂರವಾಗಿರದೆ ದಯೆ ತೋರಿಸುತ್ತೇವೆ ಎಂದಿದ್ದರು. ಆದರೆ ಇದೀಗ ಮತ್ತದೇ ಹಳೆ ರೀತಿಯಲ್ಲೇ ತಾಲಿಬಾನಿಗಳು ಬಣ್ಣ ಬದಲಿಸುತ್ತಿದ್ದಾರೆ.