Categories: ವಿದೇಶ

ಎಂಡೋಸಲ್ಫಾನ್ ಸಂತ್ರಸ್ಥರಿಗೆ ಮೂರು ತಿಂಗಳೊಳಗೆ ನಷ್ಟ ಪರಿಹಾರ ನೀಡಲು ಸುಪ್ರೀಂ ಆದೇಶ

ಕಾಸರಗೋಡು/ಹೊಸದಿಲ್ಲಿ: ಎಂಡೋಸಲ್ಫಾನ್ ಸಂತ್ರಸ್ಥರಿಗೆ ಮೂರು ತಿಂಗಳೊಳಗೆ ನಷ್ಟ ಪರಿಹಾರ ನೀಡುವಂತೆ  ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಓರ್ವ ಸಂತ್ರಸ್ಥರಿಗೆ ತಲಾ ಐದು ಲಕ್ಷ ರೂ. ನೀಡಬೇಕು.  ಕೀಟನಾಶಕ ಕಂಪೆನಿಗಳಿಂದ ಈ ಮೊತ್ತವನ್ನು ಸರಕಾರ ವಸೂಲು ಮಾಡಬೇಕು.  ಮೊತ್ತವನ್ನು ಕಂಪೆನಿ ನೀಡದಿದ್ದಲ್ಲಿ ಕೇಂದ್ರ ಸರಕಾರಕ್ಕೆಮೊರೆ ಹೋಗಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ. ಸಂತ್ರಸ್ಥರಿಗೆ ಅಜೀವಾವಧಿ ಚಿಕಿತ್ಸೆ, ವೈದ್ಯರ ಸೇವೆ ನೀಡಬೇಕು ಎಂದು ತೀರ್ಪು ನೀಡಿದೆ. ಈ ಬಗ್ಗೆ ಕಂಪೆನಿಗಳಿಗೆ ನ್ಯಾಯಾಲಯ ನೋಟಿಸ್ ಕಳುಹಿಸಿದೆ.  ರಾಜ್ಯ ಸರಕಾರ  ಅಗತ್ಯ ಕ್ರಮ ಗಳನ್ನು  ಮುಂದುವರಿಸುವಂತೆ ಆದೇಶ ನೀಡಿತು. ಈ ಕುರಿತು ಯುವ ಸಂಘಟನೆಯಾದ ಡಿ ವೈ ಎಫ್ ಐ  ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ  ಮುಖ್ಯ ನ್ಯಾಯಾಧೀಶ  ಜೆ .ಎಸ್ ಖೆಹರ್ ಅಧ್ಯಕ್ಷತೆಯ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಸಂತ್ರಸ್ಥರಿಗೆ ಜೀವಾನುದುದ್ದಕ್ಕೂ ವೈಕಲ್ಯವನ್ನು ಎದುರಿಸಬೇಕಾಗಿ ಬರಲಿದ್ದು ಇದರಿಂದ ನಷ್ಟ ಪರಿಹಾರ ಡಿವೈಎಫ್ ಐ ಒತ್ತಾಯಿಸಿತ್ತು. ರಾಜ್ಯ ಸರಕಾರವು ತಲಾ ಐದು ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ನೀಡಿರುವ ಬಗ್ಗೆ ಕಂಪೆನಿ  ನ್ಯಾಯಾಲಯದ ಗಮನಕ್ಕೆ ತಂದಿತ್ತು.

ಆದರೆ ಸರಕಾರ  ನಷ್ಟ ಪರಿಹಾರ  ನೀಡಲು ಸರಕಾರ ಯಾಕೆ ವಿಳಂಬ ಉಂಟು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. 458 ಕೋಟಿ ರೂ .ಗಳ  ಪ್ಯಾಕೇಜ್  ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿರುವುದಾಗಿ  ಕಂಪೆನಿ ಗಮನಕ್ಕೆ ತಂದಿದ್ದು. ಇದರಿಂದ ನಷ್ಟ ಪರಿಹಾರಕ್ಕೆ ಕೇಂದ್ರ ಸರಕಾರವನ್ನು  ಸಮೀಪಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಎಂಡೋ ಸಲ್ಫಾನ್ ಉತ್ಪಾದಕ ಸಂಘಟನೆಯಾದ ಸೆಂಟ್ರಲ್ ಎನ್ವಾರ್ನ್ ಮೆಂಟ್ ಆಂಡ್  ಆಗ್ರೋ  ಕೆಮಿಕಲ್ಸ್ ಗೆ  ನ್ಯಾಯಾಲಯ ನಿಂದನೆಗೆ ನೋಟಿಸ್ ಕಳುಹಿಸಿದೆ.

Desk

Recent Posts

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ: ಮಲ್ಲಪ್ಪ ಸಾಲಿ

ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ…

14 mins ago

ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು.

28 mins ago

ಗಂಡನಿಂದಲೇ ಯುವತಿಯ ಮೇಲೆ ಅತ್ಯಾಚಾರ ಮಾಡಿಸಿ 10 ಸಾವಿರ ರೂ. ಡಿಮ್ಯಾಂಡ್‌ ಮಾಡಿದ ದಂಪತಿ

ಈವೆಂಟ್ ಮ್ಯಾನೆಜ್​ಮೆಂಟ್ ಮಾಡುವ ಯುವತಿಗೆ ಮತ್ತು ಬರುವ ಪಾನೀಯ ಕೊಟ್ಟು ಗಂಡನಿಂದ ಅತ್ಯಾಚಾರ ಮಾಡಿಸಿದ್ದ ಬ್ಯೂಟಿಷಿಯನ್​ ಮಹಿಳೆಯನ್ನು ಪೊಲೀಸರು ಬಂಧಿಸಿರುವ…

49 mins ago

ಚಲಿಸುತ್ತಿದ್ದ ಬಸ್​ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

ಚಲಿಸುತ್ತಿದ್ದ ಬಸ್​ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ  ಘಟನೆ ಮೈಸೂರಿನಲ್ಲಿ ನಡೆದಿದೆ.

1 hour ago

ದಲಿತ ಯುವತಿಯ ಮೇಲೆ ಅನ್ಯಕೋಮಿನ ಯುವಕ ಅತ್ಯಾಚಾರ : ಆರೋಪಿ ಪೊಲೀಸರ ವಶಕ್ಕೆ

ಹುಬ್ಬಳ್ಳಿಯಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದ ಆರೋಪಿ ಸದ್ದಾಂ ಹುಸೇನ್…

1 hour ago

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago