News Karnataka Kannada
Thursday, May 02 2024
ವಿದೇಶ

ವರ್ಷದ ಕೊನೆಗೆ ವಿಶ್ವದ ಶೇ.40ರಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲು ಪ್ರತಿಜ್ಞೆ

Vaccine 17072021
Photo Credit :

ರೋಮ್:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ವಿಶ್ವನಾಯಕರ ಸಮ್ಮೇಳನದಲ್ಲಿ ಕೋವಿಡ್ ವಿರುದಧ ಕ್ಷೀಪ್ರಗತಿಯಲ್ಲಿ ಹೋರಾಟ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬಲ ಪಡಿಸಬೇಕು. ಅಭಿವೃದ್ಧಿಶೀಲ ರಾಷ್ಟ್ರಗಳಿಲಗೆ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳಬೇಕು. 2021ರ ಅಂತ್ಯದ ವೇಳೆಗೆ ಶೇ.40ರಷ್ಟು ವಿಶ್ವಜನಸಂಖ್ಯೆಗೆ ಲಸಿಕೆ ನೀಡಬೇಕು, 2022ರ ಮಧ್ಯ ಭಾಗಕ್ಕೆ ಶೇ.70ರಷ್ಟು ಮಂದಿಗೆ ಲಸಿಕೆ ನೀಡುವಂತಾಗಬೇಕು ಎಂದು ನಿರ್ಣಯ ಅಂಗೀಕರಿಸಲಾಗಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಲು ಸಹಮತ ವ್ಯಕ್ತ ಪಡಿಸಿರುವ ಜಿ20 ರಾಷ್ಟ್ರಗಳ ಮುಖ್ಯಸ್ಥರು, ಈ ವರ್ಷಾಂತ್ಯಕ್ಕೆ ವಿಶ್ವದ ಶೇ.40ರಷ್ಟು ಜನಸಂಖ್ಯೆಗೆ ಕೋವಿಡ್ ನಿರೋಧಕ ಲಸಿಕೆ ನೀಡಲು ಪ್ರತಿಜ್ಞೆ ಮಾಡಿದ್ದಾರೆ.

ಮಾರಣಾಂತಿಕ ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಕಾರ್ಯಕರ್ತರಿಗೆ, ಅಂತರರಾಷ್ಟ್ರೀಯ ಸಮುದಾಯ ಕಾರ್ಯಕರ್ತರು ಮತ್ತು ವಿಜ್ಞಾನಿಗಳ ಶ್ರಮವನ್ನು ಜಿ20 ರಾಷ್ಟ್ರಗಳ ನಾಯಕರು ಧನ್ಯವಾದ ಹೇಳಿದ್ದಾರೆ.

ಸೋಮವಾರ ಅಂಗೀಕರಿಸಲಾದ ರೋಮ್ ಘೋಷಣೆಯಲ್ಲಿ, ಮುಂದುವರೆಯುತ್ತಿರುವ ರಾಷ್ಟ್ರಗಳ ಜನರಿಗೂ ಕೈಗೆಟಕುವ ದರದಲ್ಲಿ ಸುರಕ್ಷಿತವಾದ ಲಸಿಕೆ ಒದಗಿಸುವ ಪ್ರಸ್ತಾಪಗಳಿವೆ. ಕೋವಿಡ್ ವಿರುದ್ಧ ಹೋರಾಟಕ್ಕೆ ಲಸಿಕೆಯೊಂದೆ ಸೂಕ್ತ ಮಾರ್ಗ ಎಂದು ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು